ಭಯೋತ್ಪಾದನೆ ಮಾನವೀಯತೆಯ ಶತ್ರು! – ಪ್ರಧಾನಿ ಮೋದಿ

ಕ್ರೊಯೇಷಿಯಾದಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆ

ಜಾಗ್ರೆಬ್ (ಕ್ರೊಯೇಷಿಯಾ) – ಭಯೋತ್ಪಾದನೆ ಮಾನವೀಯತೆಯ ಶತ್ರು. ಅದು ಪ್ರಜಾಪ್ರಭುತ್ವವನ್ನು ನಂಬುವ ಶಕ್ತಿಗಳ ವಿರುದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಎರಡು ದಿನಗಳ ಯುರೋಪ್ ಪ್ರವಾಸಕ್ಕಾಗಿ ಕ್ರೊಯೇಷಿಯಾಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಮಂತ್ರ ಪಠಣ ಮತ್ತು ಭಾರತೀಯ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಇದರ ನಂತರ ಪ್ರಧಾನಿ ಮೋದಿ ಭಾರತೀಯ ಸಮುದಾಯದ ಜನರನ್ನು ಭೇಟಿಯಾದರು. ಪ್ರಧಾನಿ ಮೋದಿ ಕ್ರೊಯೇಷಿಯಾದ ಪ್ರಧಾನಿ ಆಂಡ್ರೇಜ್ ಪ್ಲೆಂಕೋವಿಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದು ಭಾರತೀಯ ಪ್ರಧಾನಿಯ ಮೊದಲ ಕ್ರೊಯೇಷಿಯಾ ಪ್ರವಾಸವಾಗಿದೆ. ಇಲ್ಲಿ 17 ಸಾವಿರಕ್ಕೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ.

ಭಯೋತ್ಪಾದನೆ ಜಗತ್ತಿಗೆ ಅತಿದೊಡ್ಡ ಅಪಾಯ ! – ಕ್ರೊಯೇಷಿಯಾದ ಪ್ರಧಾನಿ ಆಂಡ್ರೇಜ್ ಪ್ಲೆಂಕೋವಿಕ್

ಕ್ರೊಯೇಷಿಯಾದ ಪ್ರಧಾನಿ ಆಂಡ್ರೇಜ್ ಅವರು, ನಾವು ಭಾರತದಲ್ಲಿನ ಭಯೋತ್ಪಾದಕ ದಾಳಿಗಳ ಬಗ್ಗೆಯೂ ಚರ್ಚಿಸಿದ್ದೇವೆ. ಭಯೋತ್ಪಾದನೆ ವಿರುದ್ಧದ ಹೋರಾಟದ ಕುರಿತು ಪ್ರಧಾನಿ ಮೋದಿ ಅವರ ಸಂದೇಶವನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ; ಏಕೆಂದರೆ ಅದು ಜಗತ್ತಿಗೆ ಅತಿದೊಡ್ಡ ಅಪಾಯವಾಗಿದೆ, ಎಂದು ಹೇಳಿದರು.