SANATAN PRABHAT EXCLUSIVE : ದೇಶದ ಸರಕಾರವು ‘ಹಿಸ್ ಸ್ಟೋರಿ ಆಫ್ ಇತಿಹಾಸ’ ಚಲನ ಚಿತ್ರದ ಪ್ರಚಾರಕ್ಕಾಗಿ ಸಹಾಯ ಮಾಡಬೇಕು!

  • ‘ಸನಾತನ ಪ್ರಭಾತ’ ಮೂಲಕ ಚಲನಚಲನ ಚಿತ್ರದ ಲೇಖಕ-ನಿರ್ದೇಶಕ ಮನಪ್ರೀತ ಸಿಂಗ ಧಾಮಿ ಅವರೊಂದಿಗೆ ನೇರ ಸಂಭಾಷಣೆ!

  • ರಾಜಕೀಯ ಮತ್ತು ಆರ್ಥಿಕ ಬೆಂಬಲದ ಕೊರತೆಯಿಂದ ಜನರ ಬೆಂಬಲವನ್ನೂ ನಿರೀಕ್ಷೆ ವ್ಯಕ್ತ !

  • ತೆರಿಗೆಯಲ್ಲಿ ವಿನಾಯತಿ ನೀಡುವಂತೆ ಆಗ್ರಹ

ನವದೆಹಲಿ – ‘ಹಿಸ್ ಸ್ಟೋರಿ ಆಫ್ ಇತಿಹಾಸ’ ಎಂಬ ಚಲನ ಚಿತ್ರವನ್ನು ನಿರ್ಮಿಸುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ. ಯಾವುದೇ ಚಲನ ಚಿತ್ರಕ್ಕೆ ರಾಜಕೀಯ ಬೆಂಬಲ ಅಥವಾ ಆರ್ಥಿಕ ನೆರವು ಬೇಕಾಗುತ್ತದೆ. ನನ್ನ ಬಳಿ ಇವೆರಡೂ ಇಲ್ಲ. ಆದರೂ, ಜನರ ಬೆಂಬಲದಿಂದ ‘ಹಿಸ್ ಸ್ಟೋರಿ ಆಫ್ ಇತಿಹಾಸ’ ಚಲನ ಚಿತ್ರವು ಹೆಚ್ಚು ಹೆಚ್ಚು ಸಮಾಜವನ್ನು ತಲುಪಬಹುದು. ಇಂತಹ ಜನಬೆಂಬಲ ಇಲ್ಲಿಯವರೆಗೆ ಯಾವುದೇ ಚಲನ ಚಿತ್ರಕ್ಕೆ ಸಿಕ್ಕಿಲ್ಲ; ಆದರೆ ಈ ಚಲನ ಚಿತ್ರದ ನಿಮಿತ್ತ ಜನರು ತಮ್ಮ ನಗರ ಅಥವಾ ಗ್ರಾಮದಲ್ಲಿ ಇದನ್ನು ಪ್ರದರ್ಶಿಸಲು ಸಂಘಟಿತವಾಗಿ ಬೇಡಿಕೆ ಇಟ್ಟರೆ, ಏನಾದರೂ ಆಗಬಹುದು, ಎಂದು ಚಲನ ಚಿತ್ರದ ಲೇಖಕ ಮತ್ತು ನಿರ್ದೇಶಕ ಮನಪ್ರೀತ ಸಿಂಗ ಧಾಮಿ ಅವರು ‘ಸನಾತನ ಪ್ರಭಾತ’ಕ್ಕೆ ತಿಳಿಸಿದರು. ಚಲನ ಚಿತ್ರ ಬಿಡುಗಡೆಯಾಗಿ 3 ವಾರಗಳಾಗಿವೆ. ಈ ನಿಮಿತ್ತ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಅವರೊಂದಿಗೆ ದೂರವಾಣಿ ಮೂಲಕ ಸಂವಾದ ನಡೆಸಿದರು. ಚಲನ ಚಿತ್ರದ ಪ್ರಚಾರಕ್ಕಾಗಿ ನಮಗೆ ಭಾಜಪ ಸಹಾಯ ಮಾಡಬೇಕು ಎಂದು ಧಾಮಿ ಅವರು ವಿನಂತಿಸಿಕೊಂಡರು.

ದಿವಾಳಿಯಾಗುವ ಸ್ಥಿತಿ!

‘ಚಲನ ಚಿತ್ರ ಬಿಡುಗಡೆಯಾಗಿ 3 ವಾರಗಳಾದರೂ ಅದನ್ನು ಸಿನಿಮಾ ಮಂದಿರಗಳಲ್ಲಿ ಪ್ರದರ್ಶಿಸಲು ಬಿಡುತ್ತಿಲ್ಲ. ನಾವು ದಿವಾಳಿಯಾಗುವ ಸ್ಥಿತಿಗೆ ತಲುಪಿದ್ದೇವೆ, ಆದರೂ ನಾವು ಚಲನ ಚಿತ್ರದ ಪ್ರಚಾರಕ್ಕಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ’ ಎಂದು ಧಾಮಿ ಅವರು ವಿಷಾದ ವ್ಯಕ್ತಪಡಿಸಿದರು.

ಧಾಮಿ ಅವರು ಪ್ರಸ್ತಾಪಿಸಿದ ಪ್ರಮುಖ ಅಂಶಗಳು!

೧. ಚಲನ ಚಿತ್ರದಲ್ಲಿ ನಾವು ಯಾವುದೇ ಸರಕಾರ ಅಥವಾ ರಾಜಕೀಯ ಪಕ್ಷವನ್ನು ಹೊಗಳಿಲ್ಲ. ಸತ್ಯವನ್ನೇ ತೋರಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

೨. ‘ಚಲನ ಚಿತ್ರವನ್ನು ‘ಒಟಿಟಿ’ಯಲ್ಲಿ ಪ್ರದರ್ಶಿಸುತ್ತೀರಾ?’ ಎಂಬ ಪ್ರಶ್ನೆಗೆ ಅವರು, ಒಟಿಟಿಯಲ್ಲಿ ಪ್ರಸಾರ ಮಾಡಲು ಚಲನ ಚಿತ್ರವನ್ನು ಹೆಚ್ಚು ಹೆಚ್ಚು ಜನರು ವೀಕ್ಷಿಸಿರಬೇಕು ಅಥವಾ ಚಲನ ಚಿತ್ರದಲ್ಲಿ ದೊಡ್ಡ ಕಲಾವಿದರು ಅಥವಾ ಅವರ ಮಕ್ಕಳು (ಸ್ಟಾರ್ಸ್ ಅಥವಾ ಸ್ಟಾರ ಕಿಡ್ಸ್) ಇರಬೇಕು. ಇವೆರಡೂ ನಮ್ಮ ಚಲನ ಚಿತ್ರದಲ್ಲಿಲ್ಲ.

ಶಾಲೆ-ಕಾಲೇಜುಗಳಲ್ಲಿ ಚಲನ ಚಿತ್ರ ಪ್ರದರ್ಶಿಸಲು ಸ್ವಯಂಸೇವಾ ಸಂಸ್ಥೆಗಳಿಗೆ ಕರೆ!

ಶಾಲೆ-ಕಾಲೇಜುಗಳಲ್ಲಿ ಈ ಚಲನ ಚಿತ್ರವನ್ನು ಪ್ರದರ್ಶಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಹೆಚ್ಚು ಹೆಚ್ಚು ಸ್ವಯಂಸೇವಾ ಸಂಸ್ಥೆಗಳು, ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಮುಂದೆ ಬರಬೇಕು ಮತ್ತು ಚಲನ ಚಿತ್ರಕ್ಕೆ ಪ್ರಾಯೋಜಕರನ್ನು ಒದಗಿಸಿ ಹೆಚ್ಚಿನ ಮಕ್ಕಳಿಗೆ ಪ್ರದರ್ಶಿಸಬೇಕು ಎಂದು ನಾನು ಕರೆ ನೀಡುತ್ತೇನೆ, ಎಂದು ಧಾಮಿ ಅವರು ದೂರವಾಣಿ ಸಂದರ್ಶನದಲ್ಲಿ ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ತಿಳಿಸಿದರು.

೩. ೫೦ ಲಕ್ಷಕ್ಕೂ ಹೆಚ್ಚು ಜನರು ಚಲನ ಚಿತ್ರದ ಟ್ರೈಲರ (ಸಣ್ಣ ಜಾಹೀರಾತು) ವೀಕ್ಷಿಸಿದ್ದಾರೆ. ಆದರೂ ಅದನ್ನು ಇಷ್ಟಪಟ್ಟವರು ಚಲನ ಚಿತ್ರವನ್ನು ನೋಡಲು ಸಿಗುವಂತೆ ಬೇಡಿಕೆ ಇಡಬೇಕು.

೪. ಚಲನ ಚಿತ್ರ ಮಾಡಲು ಸ್ಫೂರ್ತಿ ಎಲ್ಲಿಂದ ಸಿಕ್ಕಿತು ಎಂದು ಹೇಳುವಾಗ, ನೀರಜ ಅತ್ರಿ ಅವರ ಕೆಲಸವನ್ನು ನಾನು ಅರ್ಥಮಾಡಿಕೊಂಡಾಗ, ‘ನಮಗೆ ತಪ್ಪು ಇತಿಹಾಸವನ್ನು ಕಲಿಸಲಾಗಿದೆ’ ಎಂದು ತಿಳಿದು ನನಗೆ ಆಕ್ರೋಶ ಬಂತು. ನಾನು ಸಿಖ ಆಗಿದ್ದರಿಂದ ಮೊಘಲರ ಇತಿಹಾಸ ನನಗೆ ತಿಳಿದಿತ್ತು; ಆದರೆ ಇತಿಹಾಸ ಪುಸ್ತಕಗಳಲ್ಲಿ ಈ ರೀತಿ ವಿರೂಪಗೊಳಿಸಲಾಗಿದೆ ಎಂದು ಅತ್ರಿ ಅವರ ಪುಸ್ತಕವನ್ನು ಓದಿದಾಗ ನನಗೆ ಅರ್ಥವಾಯಿತು. ಚಲನ ಚಿತ್ರಕ್ಕಾಗಿ ಕಥೆ ಬರೆಯುವುದು ಮತ್ತು ಅದನ್ನು ನಿರ್ದೇಶಿಸುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ.

ಸಂಪಾದಕೀಯ ನಿಲುವು

ಇಂತಹ ಚಲನ ಚಿತ್ರಗಳ ಹೆಚ್ಚಿನ ಪ್ರಚಾರಕ್ಕಾಗಿ ಹಿಂದೂಗಳು ಪ್ರಯತ್ನಿಸುವುದು ಅವರ ಧರ್ಮಕರ್ತವ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜನರು ತಮ್ಮ ಸ್ಥಳೀಯ ಚಲನ ಚಿತ್ರ ಮಂದಿರಗಳಲ್ಲಿ ಚಲನ ಚಿತ್ರವನ್ನು ಪ್ರದರ್ಶಿಸಲು ಬೇಡಿಕೆ ಇಡುವುದು ಅತ್ಯಗತ್ಯ!