ಕೋಯಂಬತ್ತೂರು (ತಮಿಳುನಾಡು) – ಅಕ್ಟೋಬರ್ 2022 ರಲ್ಲಿ ಇಲ್ಲಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇನ್ನೂ 4 ಆರೋಪಿಗಳನ್ನು ಬಂಧಿಸಿದೆ. ಅಹ್ಮದ ಅಲಿ, ಜವಾಹರ ಸಾತಿಕ, ರಾಜಾ ಅಬ್ದುಲ್ಲಾ ಅಲಿಯಾಸ್ ಎಂ.ಎ.ಸಿ. ರಾಜಾ ಮತ್ತು ಶೇಖ ದಾವೂದ ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 8 ಜನರನ್ನು ಬಂಧಿಸಲಾಗಿದೆ. ಈ ಸ್ಫೋಟದ ಹಿಂದಿರುವ ‘ಮದ್ರಾಸ ಅರೇಬಿಕ ಕಾಲೇಜಿ’ನ ಸಂಸ್ಥಾಪಕ ಜಮೀಲ ಬಾಷಾ ಪರಾರಿಯಾಗಿದ್ದಾನೆ. ಈತ ತಮಿಳುನಾಡಿನ ಯುವಕರನ್ನು ಪ್ರಚೋದಿಸಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಿದ್ಧಪಡಿಸುತ್ತಿದ್ದನು. ಅರೇಬಿ ಭಾಷಾ ತರಗತಿಗಳ ಹೆಸರಿನಲ್ಲಿ ಸಲಫಿ-ಜಿಹಾದಿ ಸಿದ್ಧಾಂತವನ್ನು ಪ್ರಸಾರ ಮಾಡುತ್ತಿದ್ದನು. ‘ಜಿಹಾದ ಮೂಲಕ ಖಲೀಫಾ (ಷರಿಯತ್ ಮೂಲಕ ಆಳುವವನು) ಸ್ಥಾಪಿಸುವುದು’ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವ ಸರಕಾರವನ್ನು ಉರುಳಿಸಿ ಇಸ್ಲಾಮಿಕ ರಾಜ್ಯವನ್ನು ಹೇರುವುದು’ ಇವನ ಉದ್ದೇಶವಾಗಿತ್ತು.
ಕೋಯಂಬತ್ತೂರು ಸ್ಫೋಟದಲ್ಲಿ ಕಾರಿನಲ್ಲಿ ಬಾಂಬ್ ಕೊಂಡೊಯ್ಯುತ್ತಿದ್ದ ಜಮೀಷಾ ಮುಬೀನ್ ಎಂಬ ಆರೋಪಿ ಸಾವನ್ನಪ್ಪಿದ್ದನು. ಇತನು ಈ ಬಾಂಬ್ ವನ್ನು ನಗರದ ಮಧ್ಯಭಾಗದಲ್ಲಿ ಇಡಲು ಯೋಜಿಸಿದ್ದನು; ಆದರೆ ಕಾರಿನಲ್ಲಿ ಹೋಗುತ್ತಿದ್ದಾಗ ಪೊಲೀಸ ಚೆಕ್-ಪೋಸ್ಟ್ ನೋಡಿ, ದೇವಸ್ಥಾನದ ಮುಂದೆ ಕಾರನ್ನು ನಿಲ್ಲಿಸಿದ್ದಾನೆ ಮತ್ತು ನಂತರ ಗ್ಯಾಸ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ.
ಸಂಪಾದಕೀಯ ನಿಲುವುಇಂತಹವರನ್ನು ಪೋಷಿಸುವ ಬದಲು, ಅವರ ವಿರುದ್ಧ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು! |