Canada Khalistan Interference : ಕೆನಡಾದ ಖಲಿಸ್ತಾನಿ ಭಯೋತ್ಪಾದಕರಿಂದ ಭಾರತದಲ್ಲಿನ ಹಿಂಸಾಚಾರಕ್ಕೆ ಬೆಂಬಲ! – ಕೆನಡಾದ ಗುಪ್ತಚರ ಸಂಸ್ಥೆ

ಒಟಾವಾ – ಕೆನಡಾದ ಗುಪ್ತಚರ ಸಂಸ್ಥೆ ‘ಕೆನಡಾ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ’ (ಸಿ.ಎಸ್.ಐ.ಎಸ್.) ಮೊದಲ ಬಾರಿಗೆ ಅಧಿಕೃತವಾಗಿ ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕರ ಅಸ್ತಿತ್ವ ಮತ್ತು ಭಾರತದಲ್ಲಿನ ಹಿಂಸಾಚಾರದೊಂದಿಗೆ ಅವರ ಸಂಬಂಧವನ್ನು 2024 ರ ವಾರ್ಷಿಕ ವರದಿಯಲ್ಲಿ ಒಪ್ಪಿಕೊಂಡಿದೆ. ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರು ಭಾರತದಲ್ಲಿ ಹಿಂಸಾಚಾರವನ್ನು ಬೆಂಬಲಿಸುವಲ್ಲಿ, ಹಿಂಸಾಚಾರಕ್ಕಾಗಿ ಹಣವನ್ನು ಸಂಗ್ರಹಿಸುವಲ್ಲಿ ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಇದು ಭಾರತದ ದಾವೆಯನ್ನು ಸಾಬೀತುಪಡಿಸುವ ಪ್ರಮುಖ ಸ್ವೀಕೃತಿಯಾಗಿದೆ.

“ರಾಜಕೀಯದಿಂದ ಕೂಡಿದ ಹಿಂಸಾತ್ಮಕ ಭಯೋತ್ಪಾದನೆಯು 1980 ರ ದಶಕದ ಮಧ್ಯಭಾಗದಲ್ಲಿ ಕೆನಡಾದಲ್ಲಿ ಅಸ್ತಿತ್ವದಲ್ಲಿದ್ದ ಖಲಿಸ್ತಾನಿ ಭಯೋತ್ಪಾದಕರೊಂದಿಗೆ ಪ್ರಾರಂಭವಾಯಿತು. ಈ ಭಯೋತ್ಪಾದಕರು ಹಿಂಸಾಚಾರದ ಮೂಲಕ ಭಾರತದ ಪಂಜಾಬದಲ್ಲಿ ಪ್ರತ್ಯೇಕ ಖಲಿಸ್ತಾನ ದೇಶವನ್ನು ರಚಿಸಲು ಬಯಸುತ್ತಾರೆ. ಈಗ ಕೆನಡಾದಲ್ಲಿರುವ ಕೆಲವು ಖಲಿಸ್ತಾನಿ ಭಯೋತ್ಪಾದಕರು ಹಿಂಸಾಚಾರದ ಮೂಲಕ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ವರದಿಯಲ್ಲಿ ಹೇಳಲಾಗಿದೆ.