ತೀವ್ರ ಆಧ್ಯಾತ್ಮಿಕ ತೊಂದರೆ ಇರುವವರು ಸಾಧನೆ ಹೇಗೆ ಮಾಡಬೇಕು ಎಂಬುದರ ಆದರ್ಶಪ್ರಾಯರಾಗಿದ್ದ ಶ್ರೀ. ಧೈವತ್ ವಾಘಮಾರೆ!

ನಿಧನ ವಾರ್ತೆ

ಶ್ರೀ. ದೈವತ ವಾಘಮಾರೆ

ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮದಲ್ಲಿ ಪೂರ್ಣಕಾಲಿನ ಸಾಧನೆ ಮಾಡುತ್ತಿದ್ದ ಸಾಧಕ ಧೈವತ್ ವಾಘಮಾರೆ (45 ವರ್ಷ) ಅವರು 2025ರ ಜೂನ್ 17ರ ರಾತ್ರಿ ಆಕಸ್ಮಿಕವಾಗಿ ನಿಧನರಾದರು. ಅವರು ತಮ್ಮ ತಾಯಿ ಶ್ರೀಮತಿ ಅಲ್ಕಾ ವಾಘ್ಮಾರೆ, ಅಕ್ಕ ಶ್ರೀಮತಿ ಧನಶ್ರೀ ದೇಶಪಾಂಡೆ, ಸೋದರಸೊಸೆ ಕು. ಸಾಯಿಲಿ ದೇಶಪಾಂಡೆ (ಅಕ್ಕನ ಮಗಳು) ಮತ್ತು ಸೋದರಳಿಯ (ಅಕ್ಕನ ಮಗ) ಕು. ಶ್ರೀನಿವಾಸ ದೇಶಪಾಂಡೆ ಅವರನ್ನು ಅಗಲಿದ್ದಾರೆ. ಇವರೆಲ್ಲರೂ ಸನಾತನದ ರಾಮನಾಥಿ ಆಶ್ರಮದಲ್ಲಿ ಪೂರ್ಣಕಾಲಿನ ಸಾಧನೆ ಮಾಡುತ್ತಾರೆ. “ದಿವಂಗತ ಧೈವತ್ ವಾಘಮಾರೆ ಅವರಿಗೆ ಸದ್ಗತಿ ಪ್ರಾಪ್ತಿಯಾಗಲಿ” ಎಂದು ಸನಾತನ ಪರಿವಾರದಿಂದ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

“ಶ್ರೀ ಧೈವತ್ ವಾಘಮಾರೆ ಅವರು ಆಕಸ್ಮಿಕ ನಿಧನರಾದರು. ಶ್ರೀ. ಧೈವತ್ ಅವರು 1999 ರಿಂದ ಪೂರ್ಣಕಾಲಿನ ಸಾಧನೆ ಮಾಡಲು ಪ್ರಾರಂಭಿಸಿದರು. 2003 ರಿಂದ ಅವರಿಗೆ ಕೆಟ್ಟ ಶಕ್ತಿಗಳಿಂದ ತೀವ್ರ ತೊಂದರೆಯಾಗಲು ಪ್ರಾರಂಭಿಸಿತು. ಆ ತೊಂದರೆಯ ತೀವ್ರತೆ ಎಷ್ಟಿತ್ತೆಂದರೆ, ಅನೇಕ ಬಾರಿ ಅದು ಅವರ ಜೀವಕ್ಕೆ ಅಪಾಯ ತಂದೊಡ್ಡಿತ್ತು. ಆದರೆ, ಅವರ ಸಾಧನೆಯ ತೀವ್ರ ತಳಮಳ ಮತ್ತು ಅದರಿಂದ ಅವರೊಂದಿಗಿದ್ದ ಈಶ್ವರನ ಕೃಪೆಯಿಂದ ಅವರು ಆ ಸಂಕಷ್ಟಗಳಿಂದ ಪಾರಾದರು. ಅವರಲ್ಲಿನ ಕ್ಷಾತ್ರವೃತ್ತಿಯಿಂದಾಗಿಯೇ ಅವರಿಗೆ ತೀವ್ರ ಆಧ್ಯಾತ್ಮಿಕ ತೊಂದರೆಯನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತಿತ್ತು. ಅನೇಕ ವರ್ಷಗಳ ಕಾಲ ಅವರು ನನ್ನೊಂದಿಗೆ ಗ್ರಂಥಗಳಿಗಾಗಿ ಬರವಣಿಗೆಯ ಸಂಕಲನದ ಸೇವೆಯನ್ನೂ ಮಾಡಿದರು. ಕಂಪ್ಯೂಟರ್ ದುರಸ್ತಿ ಮಾಡುವುದಾಗಲಿ ಅಥವಾ ಬರವಣಿಗೆಯನ್ನು ಸಂಗ್ರಹಿಸುವುದಾಗಲಿ, ಅವರು ಎಲ್ಲಾ ಸೇವೆಗಳನ್ನು ಉತ್ತಮವಾಗಿ ಮಾಡುತ್ತಿದ್ದರು. ಧೈವತ್ ಅವರು ತಮ್ಮ 25 ವರ್ಷಗಳ ಸಾಧನೆಯ ಅವಧಿಯಲ್ಲಿ ‘ತೀವ್ರ ಆಧ್ಯಾತ್ಮಿಕ ತೊಂದರೆ ಇದ್ದರೂ ಸಾಧನೆ ಹೇಗೆ ಮಾಡಬಹುದು?’ ಎಂಬುದಕ್ಕೆ ಒಂದು ಆದರ್ಶವನ್ನು ನಿರ್ಮಿಸಿದ್ದಾರೆ. ಅವರಲ್ಲಿನ ಸಾಧಕತ್ವದಿಂದ ಅವರ ಆಧ್ಯಾತ್ಮಿಕ ಪ್ರಗತಿ ಉತ್ತಮವಾಗಿ ನಡೆಯುತ್ತಿದೆ ಮತ್ತು ಮುಂದೆಯೂ ಆಗುತ್ತದೆ ಎಂದು ನನಗೆ ಖಚಿತವಾಗಿದೆ.”

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ