ಜಬಲ್ಪುರ್ (ಮಧ್ಯಪ್ರದೇಶ) ಘಟನೆ
ಜಬಲ್ಪುರ್ (ಮಧ್ಯಪ್ರದೇಶ) – ಜಿಲ್ಲೆಯ ಅನುಪಪುರ್‌ನಲ್ಲಿ ನಡೆದ ಘಟನೆಯೊಂದರಲ್ಲಿ, ಮೊಹಮ್ಮದ್ ಆಕಿಬ್ ಎಂಬ ಕುಖ್ಯಾತ ರೌಡಿಯನ್ನು ಬಂಧಿಸಲು ಇಬ್ಬರು ಪೊಲೀಸರು ಹೋಗಿದ್ದರು. ಈ ವೇಳೆ ಮೊಹಮ್ಮದ್‌ನ ಮನೆಯವರು ಇಬ್ಬರನ್ನೂ ಕೂಡಿಹಾಕಿ ಥಳಿಸಿದ್ದಾರೆ. ಇದರ ಲಾಭ ಪಡೆದು ಮೊಹಮ್ಮದ್ ಪರಾರಿಯಾಗಿದ್ದಾನೆ. ಇಬ್ಬರು ಪೊಲೀಸರನ್ನು ಬಿಡಿಸಲು ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಯಿತು. ಮೊಹಮ್ಮದ್ ಮತ್ತು ಆತನ ಕುಟುಂಬದ 4 ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೊಹಮ್ಮದ್ ವಿರುದ್ಧ ಕಳ್ಳತನ ಮತ್ತು ದರೋಡೆಯಂತಹ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.
ಸಂಪಾದಕೀಯ ನಿಲುವುಅಪರಾಧಿಗಳಿಂದ ಥಳಿತಕ್ಕೊಳಗಾಗುವುದು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ! ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಪೊಲೀಸರು, ಜನರನ್ನು ಹೇಗೆ ರಕ್ಷಿಸುತ್ತಾರೆ? |