ಏರ್ ಇಂಡಿಯಾ: ತಾಂತ್ರಿಕ ದೋಷದಿಂದ ಸ್ಯಾನ್ ಫ್ರಾನ್ಸಿಸ್ಕೋ-ಮುಂಬಯಿ ವಿಮಾನ ಕೋಲಕೊತಾದಲ್ಲಿ ಲ್ಯಾಂಡಿಂಗ್

ಕರ್ಣಾವತಿ-ಲಂಡನ್ ವಿಮಾನದ ಹಾರಾಟ ರದ್ದು

ಕೋಲಕಾತಾ (ಬಂಗಾಳ) – ತಾಂತ್ರಿಕ ದೋಷದಿಂದಾಗಿ ಏರ್ ಇಂಡಿಯಾದ ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬಯಿಗೆ ಹೊರಟಿದ್ದ ವಿಮಾನವು ಕೋಲಕಾತಾದಲ್ಲಿ ಇಳಿಸಿ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಇನ್ನೊಂದೆಡೆ, ಕರ್ಣಾವತಿಯಿಂದ ಲಂಡನ್‌ಗೆ ಹೊರಟಿದ್ದ ಮತ್ತೊಂದು ಏರ್ ಇಂಡಿಯಾದ ವಿಮಾನವನ್ನು ಯಾವುದೇ ಕಾರಣ ನೀಡದೆ ರದ್ದುಗೊಳಿಸಲಾಗಿದೆ.

ಏರ್ ಇಂಡಿಯಾದ ವಿಮಾನವು AI-180 ಅದರ ನಿಗದಿತ ಸಮಯದ ಪ್ರಕಾರ ಸ್ಯಾನ್ ಫ್ರಾನ್ಸಿಸ್ಕೋದಿಂದ ಹಾರಾಟ ಆರಂಭಿಸಿತು. ಈ ವಿಮಾನವು ಮಧ್ಯರಾತ್ರಿ ಕೋಲಕಾತಾ ತಲುಪಿದಾಗ, ವಿಮಾನದ ಎಡ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ನಾಲ್ಕು ಗಂಟೆಗಳ ನಂತರ, ಪೈಲಟ್ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಇಳಿಯುವಂತೆ ವಿನಂತಿಸಿದರು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಟಿಕೆಟ್ ನ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದರು.