|
ಆಜಮಗಢ (ಉತ್ತರ ಪ್ರದೇಶ) – ಮುಸ್ಲಿಂ ಬಹುಸಂಖ್ಯಾತ ಛೋಟಾ ಪುರಂ ಗ್ರಾಮದಲ್ಲಿ ಸುಮಾರು 40 ಹಿಂದೂ ಕುಟುಂಬಗಳು ತಮ್ಮ ಮನೆಗಳಿಗೆ ‘ಮನೆ ಮಾರಾಟಕ್ಕಿದೆ’ ಎಂಬ ಫಲಕಗಳನ್ನು ಹಾಕಿದ್ದಾರೆ. ಈ ಜನರು ತಾವು ಅಸುರಕ್ಷಿತರಾಗಿದ್ದೇವೆಂದು ಹೇಳಿದ್ದಾರೆ. ಮುಸ್ಲಿಮರಿಂದ ಪದೇ ಪದೇ ನಡೆಯುತ್ತಿರುವ ಕಿರುಕುಳ, ಅತ್ಯಾಚಾರದ ಬೆದರಿಕೆಗಳಿಂದ ಇವರು ತೊಂದರೆಗೊಳಗಾಗಿದ್ದಾರೆ ಮತ್ತು ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಲ್ಲಿನ ಜನರು ಆರೋಪಿಸುತ್ತಿದ್ದಾರೆ. ಜೂನ್ 3 ರಂದು ಮುಸ್ಲಿಂ ಯುವಕರು ಒಂದು ಮದುವೆ ಸಮಾರಂಭದಲ್ಲಿ ಮಹಿಳೆಯರಿಗೆ ತೊಂದರೆ ನೀಡಿದರು. ಈ ಘಟನೆಯಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, 20 ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದೆ. ಇದರಿಂದ ಗ್ರಾಮದಲ್ಲಿ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿದೆ.
ವಿವಾಹದ ಸಮಯದಲ್ಲಿ ಮುಸ್ಲಿಂ ಯುವಕರು ಅಲ್ಲಿಗೆ ಬಂದು ಹಿಂದೂ ಮಹಿಳೆಯರ ಅನುಮತಿಯಿಲ್ಲದೆ ವಿಡಿಯೋ ಮಾಡಲು ಪ್ರಾರಂಭಿಸಿದರು. ಇದಕ್ಕೆ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸಿದಾಗ, ಮುಸ್ಲಿಂ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯರ ಮಾನಭಂಗ ಮಾಡಿದರು. ಭಯಗೊಂಡ ಮಹಿಳೆಯರು ಸಹಾಯಕ್ಕಾಗಿ ಕೂಗಿಕೊಂಡರು, ಅವರ ಸಹಾಯಕ್ಕಾಗಿ ಪುರುಷ ಸಂಬಂಧಿಕರು ಮಧ್ಯಪ್ರವೇಶಿಸಿದಾಗ ಯುವಕರು ಹಲ್ಲೆ ನಡೆಸಿದರು.
ಮಹಿಳೆಯರು ಮತ್ತು ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಸಾಧ್ಯವಿಲ್ಲ! – ಹಿಂದೂಗಳ ಆರೋಪ
ರಾಕೇಶ ಕನ್ನೌಜಿಯಾ, ಬ್ರಿಜೇಶ ಗೋಂಡ ಮತ್ತು ರಾಮ ಅವಧ ಸೇರಿದಂತೆ ಗ್ರಾಮದ ಅನೇಕ ಹಿಂದೂ ಕುಟುಂಬಗಳು ಆರೋಪಿಸಿದ್ದೇನೆಂದರೆ, ಮುಸ್ಲಿಂ ಸಮುದಾಯದ ಜನರು ಅಲ್ಲಿ-ಇಲ್ಲಿ ತಿರುಗಾಡುತ್ತಾ ಬೆದರಿಕೆ ಹಾಕುತ್ತಿದ್ದಾರೆ. ಜೂನ್ 3 ರಂದು ನಡೆದ ಸಂಘರ್ಷವು ಪ್ರತ್ಯೇಕ ಘಟನೆಯಲ್ಲ, ಬದಲಿಗೆ ಇದು ದೀರ್ಘಕಾಲದಿಂದ ನಡೆಯುತ್ತಿರುವ ಕಿರುಕುಳದ ಸರಣಿಯಾಗಿದೆ. ಕಳೆದ ಕೆಲವು ತಿಂಗಳಿಂದ ಭಕ್ತಿಗೀತೆಗಳನ್ನು ಹಾಕಿದರೆ, ಮದುವೆಯಲ್ಲಿ ಡಿಜೆ (ದೊಡ್ಡ ಸಂಗೀತ ವ್ಯವಸ್ಥೆ) ಹಾಕಿದರೆ ಅಥವಾ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿದರೆ ಕಿರುಕುಳ ಸಹಿಸಿಕೊಳ್ಳಬೇಕಾಗಿದೆ. ‘ಜೈ ಶ್ರೀರಾಮ್’ ಘೋಷಣೆ ಕೂಗುವುದು ಮತ್ತು ಉತ್ಸವಗಳನ್ನು ಆಚರಿಸುವುದು ಒಂದು ಸಮಸ್ಯೆಯಾಗಿದೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಮನೆಯಿಂದ ಹೊರಬರಲು ಸಾಧ್ಯವಿಲ್ಲ. ಅವರ ಮಾನಭಂಗ ಮಾಡಲಾಗುತ್ತದೆ ಮತ್ತು ಅವರಿಗೆ ಬೆದರಿಕೆ ಹಾಕಲಾಗುತ್ತದೆ. ನಮಗೆ ರಕ್ಷಣೆ ನೀಡದಿದ್ದರೆ, ನಾವು ವಲಸೆ ಹೋಗುತ್ತೇವೆ. ನಾವು ದೂರು ನೀಡಿದರೂ ಏನೂ ಆಗುವುದಿಲ್ಲ. ನಾವು ಅನೇಕ ಬಾರಿ ಪೊಲೀಸರನ್ನು ಸಂಪರ್ಕಿಸಿದ್ದೇವೆ. ನಾವು ಉತ್ತಮ ಭದ್ರತೆ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿನಂತಿಸಿದ್ದೇವೆ; ಆದರೆ ಏನೂ ಆಗಲಿಲ್ಲ; ಆದ್ದರಿಂದ ನಾವು ನಮ್ಮ ಮನೆಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದೇವೆ. ಕನಿಷ್ಠ ನಾವು ಬೇರೆಲ್ಲಿಯಾದರೂ ಶಾಂತಿಯಿಂದ ಬದುಕಬಹುದು.
ಹಿಂದೂಗಳ ಸುರಕ್ಷತೆಯನ್ನು ಖಚಿತಪಡಿಸುತ್ತಿದ್ದೇವೆ! – ಪೊಲೀಸ್
ಆಜಮಗಢದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಧುವನ ಕುಮಾರ ಸಿಂಗ್ ಅವರು, ಕೆಲವು ಕುಟುಂಬಗಳು ವಲಸೆ ಹೋಗುವ ಬಗ್ಗೆ ಯೋಚಿಸುತ್ತಿವೆ ಎಂದು ನಮಗೆ ತಿಳಿದುಬಂದಿದೆ. ನಾವು ಅವರೊಂದಿಗೆ ಸಂಪರ್ಕ ಸಾಧಿಸುತ್ತಿದ್ದೇವೆ ಮತ್ತು ಅವರಿಗೆ ರಕ್ಷಣೆ ನೀಡುವ ಭರವಸೆ ನೀಡುತ್ತಿದ್ದೇವೆ ಎಂದು ಹೇಳಿದರು.
ಮುಬಾರಕಪುರ ಪೊಲೀಸ್ ಠಾಣೆಯ ಪ್ರಭಾರಿ ನಿಹಾನ ನಂದನ್ ಅವರು, ಜೂನ್ 3 ರ ಘಟನೆಯ ನಂತರ ಶಾಂತಿ ಸ್ಥಾಪಿಸಲು ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಆದಾಗ್ಯೂ, ಪೊಲೀಸರ ಭರವಸೆಯ ನಂತರವೂ ಹೆಚ್ಚಿನ ಕುಟುಂಬಗಳಿಗೆ ಸಮಾಧಾನ ಎನಿಸುತ್ತಿಲ್ಲ. ಈ ಭದ್ರತೆ ಮೊದಲು ಯಾಕೆ ನೀಡಲಿಲ್ಲ? ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನೆಗಳ ಅಗತ್ಯವೇನು? ಎಂದು ನೊಂದ ಹಿಂದೂಗಳು ಪ್ರಶ್ನಿಸಿದ್ದಾರೆ.