Uttar Pradesh Pastor Arrested : ಪ್ರಾರ್ಥನಾ ಸಭೆಗಳ ಹೆಸರಿನಲ್ಲಿ ಮತಾಂತರದ ಹುನ್ನಾರ: ಪಾದ್ರಿ ಬಂಧನ!

ಗಾಜಿಯಾಬಾದ (ಉತ್ತರಪ್ರದೇಶ) ಇಲ್ಲಿನ ಘಟನೆ

ಗಾಜಿಯಾಬಾದ (ಉತ್ತರ ಪ್ರದೇಶ) – ಜನರಿಗೆ ಆಮಿಷವೊಡ್ಡಿ ಮತಾಂತರ ಮಾಡಿದ ಆರೋಪದ ಮೇಲೆ ಇಲ್ಲಿನ ರಾಹುಲ ವಿಹಾರ್ ಕಾಲೋನಿಯಲ್ಲಿ ಇತ್ತೀಚೆಗೆ ಪೊಲೀಸರು ಒಬ್ಬ ಕ್ರೈಸ್ತ ಪಾದ್ರಿ ಮತ್ತು ಅವನ ಸಹಾಯಕನನ್ನು  ಬಂಧಿಸಿದ್ದಾರೆ. ಪ್ರತಿ ಭಾನುವಾರ ಇಲ್ಲಿನ ಒಂದು ಮನೆಯಲ್ಲಿ ರಹಸ್ಯವಾಗಿ ಪ್ರಾರ್ಥನಾ ಸಭೆಗಳನ್ನು ಆಯೋಜಿಸಲಾಗುತ್ತಿತ್ತು. ಈ ಸಮಯದಲ್ಲಿ ಹಿಂದೂಗಳಿಗೆ ಆಮಿಷವೊಡ್ಡಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿತ್ತು.

1. ಮೂಲತಃ ಕೇರಳದ ನಿವಾಸಿಯಾಗಿರುವ ಪಾದ್ರಿ ವಿನೋದ ಸಾಹಿಬಾಬಾದನಲ್ಲಿ ವಾಸಿಸುತ್ತಿದ್ದನು. ಆತ ಪ್ರೇಮಚಂದ ಜಾಟವ ಎಂಬ ಮತಾಂತರಗೊಂಡ ಕ್ರೈಸ್ತನ ಮನೆಯಲ್ಲಿ ಜನರನ್ನು ಕರೆಸಿ ಕ್ರೈಸ್ತ ಧಾರ್ಮಿಕ ಸಭೆಗಳನ್ನು ಆಯೋಜಿಸುತ್ತಿದ್ದನು.

2. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಬಲ ಗುಪ್ತಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡ ಸ್ಥಳೀಯ ಪೊಲೀಸರು ಆ ಮನೆಯ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

3. ಪೊಲೀಸ್ ಅಧೀಕ್ಷಕಿ ಪ್ರಿಯಾಶ್ರೀ ಪಾಲ ಅವರು, ಇಬ್ಬರ ವಿರುದ್ಧ ‘ಉತ್ತರಪ್ರದೇಶ ಅಕ್ರಮ ಮತಾಂತರ ನಿಷೇಧ ಕಾಯ್ದೆ’ಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶದಲ್ಲಿ ಮತಾಂತರ ವಿರೋಧಿ ಕಾನೂನಿದ್ದರೂ, ಕ್ರೈಸ್ತ ಪಾದ್ರಿಗಳು ಹಗಲು ಹೊತ್ತಿನಲ್ಲಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ. ಹಾಗಾಗಿ ಈಗ ಕಾನೂನಿನಲ್ಲಿ ಸುಧಾರಣೆ ತಂದು ಗಲ್ಲು ಶಿಕ್ಷೆಯ ನಿಬಂಧನೆಯನ್ನು ಏಕೆ ಸೇರಿಸಬಾರದು ಎಂದು ಯಾರಾದರೂ ಹೇಳಿದರೆ ಅದು ಸೂಕ್ತವೇ ಆಗಿದೆ!