PM Modi Visit Canada G7 Khalistan Protest: ಕೆನಡಾ: ಪ್ರಧಾನಿ ಮೋದಿ ವಿರುದ್ಧ ಖಲಿಸ್ತಾನಿಗಳ ಪ್ರತಿಭಟನೆ, ಮೋದಿಯವರ ಬೆಂಬಲಕ್ಕೆ ಭಾರತೀಯ ನಾಗರಿಕರ ಪ್ರದರ್ಶನ!

  • ಜಿ-೭ ಶೃಂಗಸಭೆಗೆ ಪ್ರಧಾನಿ ಮೋದಿ ಕೆನಡಾ ಪ್ರವಾಸ

  • ಖಲಿಸ್ತಾನಿಗಳಿಂದ ಮೋದಿ ಜೈಲಿನಲ್ಲಿರುವ ಚಿತ್ರಗಳ ಪ್ರದರ್ಶನ !

  • ‘ಭಾರತವನ್ನು ವಿಭಜಿಸಿ’ ಎಂಬ ಘೋಷಣೆಯನ್ನೂ ಕೂಗಿದರು!

(ಜಿ-೭ ಎಂದರೆ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಅಮೆರಿಕ ಈ ೭ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಗುಂಪು)

ಒಟ್ಟಾವಾ (ಕೆನಡಾ) – ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಿ-೭ ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾ ಪ್ರವಾಸದಲ್ಲಿದ್ದಾರೆ. ಅವರ ಆಗಮನದ ಸ್ಥಳದಲ್ಲಿ ಖಲಿಸ್ತಾನಿಗಳಿಂದ ಅವರ ವಿರುದ್ಧ ಪ್ರತಿಭಟನೆಗಳು ನಡೆದವು. ಈ ಸಮಯದಲ್ಲಿ ಖಲಿಸ್ತಾನಿ ಧ್ವಜಗಳನ್ನು ಹಾರಿಸಲಾಯಿತು. ‘ಭಾರತವನ್ನು ವಿಭಜಿಸಿ’ ಎಂಬ ಘೋಷಣೆಯನ್ನೂ ಕೂಗಿದರು. ಕೈಯಲ್ಲಿದ್ದ ಭಿತ್ತಿಪತ್ರಗಳಲ್ಲಿ ಪ್ರಧಾನಮಂತ್ರಿಗೆ ಕೈಕೋಳ ಹಾಕಿ ಜೈಲಿನಲ್ಲಿ ಹಾಕಿರುವ ಚಿತ್ರಗಳನ್ನು ಪ್ರಸಾರ ಮಾಡಲಾಯಿತು.

ಮತ್ತೊಂದೆಡೆ, ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಬೆಂಬಲಿಗರೂ ರಸ್ತೆಗಿಳಿದರು. ಖಲಿಸ್ತಾನಿಗಳು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಪ್ರಧಾನಿಯವರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಅವರ ಪ್ರವಾಸವು ಜೂನ್ ೧೬ ಮತ್ತು ೧೭ ಹೀಗೆ ಎರಡು ದಿನಗಳದ್ದಾಗಿದೆ.

ಸಂಪಾದಕೀಯ ನಿಲುವು

ಖಲಿಸ್ತಾನಿಗಳ ಈ ಕೃತ್ಯದ ವಿರುದ್ಧ ಭಾರತ ಸೇರಿದಂತೆ ‘ಜಿ-೭’ ರಾಷ್ಟ್ರಗಳಾದ ಫ್ರಾನ್ಸ್, ಇಟಲಿ, ಜಪಾನ್ ಮತ್ತು ಅಮೆರಿಕ ಈ ಭಾರತದ ಸ್ನೇಹ ರಾಷ್ಟ್ರಗಳು ಎಂದು ಹೇಳಿಕೊಳ್ಳುವ ಇವರು, ಶೃಂಗಸಭೆಯಲ್ಲೇ ಕೆನಡಾ ವಿರುದ್ಧ ಖಂಡನಾ ಠರಾವನ್ನು ಅಂಗೀಕರಿಸಬೇಕು!