|
ಕಾರ್ಕಳ – ಇಬ್ಬರು ಮಕ್ಕಳ ತಂದೆಯಾಗಿರುವ ಮುಸ್ಲಿಂ ಬಸ್ ಚಾಲಕನೊಬ್ಬ ವಿವಾಹಿತ ಹಿಂದೂ ಮಹಿಳೆಯೊಂದಿಗೆ ಇಲ್ಲಿನ ಶೃಂಗೇರಿ ಮಠದ ಬಳಿ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದನು. ಸ್ಥಳೀಯರ ದೂರಿನ ಮೇರೆಗೆ ಬಜರಂಗ ದಳದ ಕಾರ್ಯಕರ್ತರು ಸಕ್ರಿಯರಾಗಿ, ಈ ಜೋಡಿಯನ್ನು ತಡೆದು ಶೃಂಗೇರಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಈ ಜೋಡಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಠದ ಆವರಣದಲ್ಲಿ ಇಂತಹ ಘಟನೆಗಳಿಂದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುವುದರಿಂದ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು ಲವ್ ಜಿಹಾದ್ ಪ್ರಕರಣ ಎಂದು ಹೇಳಲಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ನಡೆಯುತ್ತಿದೆ. ಸ್ಥಳೀಯರು ಹಾಗೂ ಹಿಂದುತ್ವನಿಷ್ಠ ಸಂಘಟನೆಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.
ಸಂಪಾದಕೀಯ ನಿಲುವು
|