ಅಮರೋಹ (ಉತ್ತರ ಪ್ರದೇಶ): ಪಟಾಕಿಯ ಅಕ್ರಮ ಕಾರ್ಖಾನೆಯಲ್ಲಿ ಸ್ಫೋಟ: 4 ಮಹಿಳಾ ಕಾರ್ಮಿಕರ ಸಾವು

ಉತ್ತರ ಪ್ರದೇಶದಲ್ಲಿ ಪಟಾಕಿ ಕಾರ್ಖಾನೆಗಳು ಅಕ್ರಮವಾಗಿ ನಡೆಯುತ್ತಿರುವುದು ಪೋಲಿಸ್ ಮತ್ತು ಅಲ್ಲಿನ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ!

ಅಮರೋಹಾ (ಉತ್ತರ ಪ್ರದೇಶ) – ಅಟ್ರಾಜಿ ಕಲಾ ಗ್ರಾಮದಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಇದುವರೆಗೆ 4 ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದು, ಸಾಕಷ್ಟು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕಾರ್ಖಾನೆ ಅಕ್ರಮವಾಗಿ ನಡೆಯುತ್ತಿತ್ತು. ಈ ಘಟನೆಯ ಮಾಹಿತಿ ಸಿಕ್ಕ ತಕ್ಷಣ ಪೋಲಿಸ್ ಮತ್ತು ಸರ್ಕಾರಿ ಸಿಬ್ಬಂದಿಗಳು ಸ್ಥಳಕ್ಕೆ ತಲುಪಿದರು. ಮಣ್ಣಿನ ದಿಬ್ಬದ ಅಡಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಅಮರೋಹಾದಲ್ಲಿ ಈ ಹಿಂದೆಯೂ ಕೂಡ ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟದ ಹಲವು ಘಟನೆಗಳು ಸಂಭವಿಸಿವೆ. ಈ ಹಿಂದೆ ಅಮರೋಹಾದ ಭಾವ್ಲಿ ಗ್ರಾಮದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು.