ತುರ್ತು ಪರಿಸ್ಥಿತಿಯಲ್ಲಿ ಇಳಿದ ‘ಬೋಯಿಂಗ್ ಡ್ರೀಮ್‌ಲೈನರ್’ ಎರಡು ವಿಮಾನಗಳು !

ನವದೆಹಲಿ – ಕರ್ಣಾವತಿಯಲ್ಲಿ ಸಂಭವಿಸಿದ ‘ಬೋಯಿಂಗ್ ಡ್ರೀಮ್‌ಲೈನರ್’ ವಿಮಾನ ಅಪಘಾತದ ನಂತರ, ಈ ವಿಮಾನದ ಬಗ್ಗೆ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ, ಲಂಡನ್‌ನಿಂದ ಚೆನ್ನೈಗೆ ಬರುತ್ತಿದ್ದ ಬ್ರಿಟಿಷ್ ಏರ್‌ವೇಸ್‌ನ ‘ಬೋಯಿಂಗ್ 787-8 ಡ್ರೀಮ್‌ಲೈನರ್’ ವಿಮಾನ ತಾಂತ್ರಿಕ ದೋಷದಿಂದಾಗಿ ವಾಪಸ್ ಹೋಗಬೇಕಾಯಿತು. ಮತ್ತೊಂದೆಡೆ, ಲುಫ್ಥಾನ್ಸಾ ಏರ್‌ಲೈನ್ಸ್‌ನ (ಜರ್ಮನಿ) ‘ಬೋಯಿಂಗ್ 787-9 ಡ್ರೀಮ್‌ಲೈನರ್’ಗೆ ಬಾಂಬ್ ನ ಬೆದರಿಕೆ ಬಂದಿದ್ದರಿಂದ ವಿಮಾನ ವಾಪಸ್ ಸಾಗಬೇಕಾಯಿತು.

೧. ಲಂಡನ್‌ನಿಂದ ಚೆನ್ನೈಗೆ ಹೊರಟಿದ್ದ ವಿಮಾನ ತಾಂತ್ರಿಕ ದೋಷದಿಂದಾಗಿ ಹೀಥ್ರೋ ವಿಮಾನ ನಿಲ್ದಾಣಕ್ಕೆ ವಾಪಸ್ ಬಂದಿತು. ಬ್ರಿಟಿಷ್ ಏರ್‌ವೇಸ್ ವಿಮಾನದ ಹಾರಾಟದ ಸಮಯ, ಪ್ರಯಾಣಿಕರ ಮತ್ತು ಸಿಬ್ಬಂದಿ ಸಂಖ್ಯೆಯ ಮಾಹಿತಿಯನ್ನು ಮೊದಲೇ ಬಹಿರಂಗಪಡಿಸಿರಲಿಲ್ಲ. ಹಾರಾಟದ ನಂತರ ಈ ವಿಮಾನ ಸುಮಾರು ೨ ಗಂಟೆಗಳ ಕಾಲ ಆಕಾಶದಲ್ಲಿತ್ತು.

೨. ಜರ್ಮನಿಯಿಂದ ಭಾಗ್ಯನಗರಕ್ಕೆ(ಹೈದರಾಬಾದ್) ಬರುತ್ತಿದ್ದ ಲುಫ್ಥಾನ್ಸಾ ಏರ್‌ಲೈನ್ಸ್ ನ ವಿಮಾನವು ಟೇಕ್ ಆಫ್ ನಂತರ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣಕ್ಕೆ ವಾಪಸ್ ಆಯಿತು. ಈ ವಿಮಾನವು ಭಾಗ್ಯನಗರದ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.