ವೃದ್ಧೆ, ವಿಕಲಾಂಗೆಯ ಮೇಲೆ ಅತ್ಯಾಚಾರ ಮಾಡಿದ್ದ ಫಿರೋಜ್‌ ಬಂಧನ

  • ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ದಾಳಿ

  • ಪೊಲೀಸರು ಪ್ರತಿಯಾಳಿಗಾಗಿ ಹಾರಿಸಿದ ಗುಂಡೇಟಿನಿಂದ ಗಾಯಗೊಂಡ ಫಿರೋಜ್‌

ದಾಂಡೇಲಿ (ಕರ್ನಾಟಕ) – ವೃದ್ಧೆ, ವಿಕಲಾಂಗೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಫಿರೋಜ್ ಯರಗಟ್ಟಿ (23 ವರ್ಷ) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿಸುವಾಗ ಫಿರೋಜ್ ಪೊಲೀಸರ ಮೇಲೆ ದಾಳಿ ಮಾಡಿದ್ದರಿಂದ, ಆತನ ಕಾಲಿಗೆ ಗುಂಡು ಹಾರಿಸಲಾಗಿದ್ದು, ಇದರಿಂದ ಆತ ಗಾಯಗೊಂಡಿದ್ದಾನೆ. ಫಿರೋಜ್ ಅತ್ಯಾಚಾರ ಎಸಗಿ, ಮೊಬೈಲ್ ಮತ್ತು 5 ಸಾವಿರ ರೂಪಾಯಿ ಕಳವು ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಅಪರಾಧಿಗಳನ್ನು ಸರಕಾರವು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಇದಕ್ಕಾಗಿ ಈಗ ಕಠಿಣ ಕಾನೂನು ರೂಪಿಸುವುದು ಅವಶ್ಯಕ ವಾಗಿದೆ!