ನವದೆಹಲಿ – ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ ಸಿಂಗ್ ಪುರಿ ಅವರು ಮಾತನಾಡಿ, ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ನಡೆಯುತ್ತಿರುವ ತೈಲ ಅನ್ವೇಷಣೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ, ಅಂಡಮಾನ್‌ನಲ್ಲಿ ದೊರೆತ ತೈಲ ನಿಕ್ಷೇಪವು ಗಯಾನಾದಷ್ಟೇ ದೊಡ್ಡದಾಗಿರಬಹುದು ಎಂದು ಅವರು ಹೇಳಿದರು.
1. ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಸರಕಾರಿ ತೈಲ ಕಂಪನಿ ‘ಓ.ಎನ್.ಜಿ.ಸಿ.’ ತೈಲ ಅನ್ವೇಷಣೆಯಲ್ಲಿ ತೊಡಗಿಕೊಂಡಿದೆ. ‘ಓ.ಎನ್.ಜಿ.ಸಿ.’ ಅಂಡಮಾನ್‌ನಲ್ಲಿ ಇದುವರೆಗೆ 500 ಕ್ಕೂ ಹೆಚ್ಚು ತೈಲ ಬಾವಿಗಳನ್ನು ಅಗೆದಿದೆ. ಶೀಘ್ರದಲ್ಲೇ ಇಲ್ಲಿ ತೈಲ ಲಭ್ಯವಾಗಲಿದೆ, ಎಂದು ಸಚಿವ ಹರದೀಪ್ ಸಿಂಗ್ ಪುರಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2. ಪುರಿ ಅವರು, ತೈಲ ನಿಕ್ಷೇಪವು ಇಲ್ಲಿ ದೊರೆತರೆ, ಭಾರತದ ಆರ್ಥಿಕತೆಗೆ 5 ರಿಂದ 6 ಪಟ್ಟು ಲಾಭವಾಗಲಿದೆ ಎಂದು ತಿಳಿಸಿದ್ದಾರೆ.
3. ದಕ್ಷಿಣ ಅಮೆರಿಕಾದ ಗಯಾನಾ ದೇಶದಲ್ಲಿ ದೊಡ್ಡ ತೈಲ ನಿಕ್ಷೇಪ ಪತ್ತೆಯಾಗಿದೆ. ಇದರಿಂದ ಅತ್ಯಂತ ಬಡ ದೇಶವೆಂದು ಪರಿಗಣಿಸಲ್ಪಟ್ಟಿದ್ದ ಈ ದೇಶ ಈಗ ಶ್ರೀಮಂತವೆಂದು ಪರಿಗಣಿಸಲ್ಪಟ್ಟಿದೆ. ಗಯಾನಾದಲ್ಲಿ ತೈಲ ಅನ್ವೇಷಣೆಯಿಂದ ಜನರ ಅದೃಷ್ಟ ಬದಲಾಗಿದೆ. ಇಲ್ಲಿ ತಲಾ ಆದಾಯ ವೇಗವಾಗಿ ಹೆಚ್ಚಿದೆ.
4. ಭಾರತದ ಶೇ. 80 ರಷ್ಟು ತೈಲದ ಅವಶ್ಯಕತೆಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದಿಂದ ಪೂರೈಸಲಾಗುತ್ತದೆ. 2025 ರ ಆರ್ಥಿಕ ವರ್ಷದಲ್ಲಿ ತೈಲ ಆಮದಿಗಾಗಿ ಭಾರತ 177 ಬಿಲಿಯನ್ ಡಾಲರ್‍ಗಳನ್ನು (10 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಖರ್ಚು ಮಾಡಬೇಕಾಯಿತು.
5. ಇಂತಹ ಪರಿಸ್ಥಿತಿಯಲ್ಲಿ, ಅಂಡಮಾನ್‌ಲ್ಲಿ ತೈಲ ದೊರೆತರೆ, ಭಾರತವು 5 ವರ್ಷಗಳಲ್ಲಿ 50 ಲಕ್ಷ ಕೋಟಿಗಿಂತ ಹೆಚ್ಚು ಉಳಿತಾಯ ಮಾಡುತ್ತದೆ. ಈ ಹಣವು ದೇಶದಲ್ಲಿಯೇ ಉಳಿಯುವುದರಿಂದ ಆರ್ಥಿಕತೆಗೆ ಬಲ ಬರುತ್ತದೆ. ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರ ಹೇಳಿಕೆಯಿಂದ ಭಾರತೀಯರ ನಿರೀಕ್ಷೆಗಳು ಇನ್ನಷ್ಟು ಹೆಚ್ಚಿವೆ.