Temple Land Grabbing : ಲೋವರ್ ಪರೆಲ್ ನಲ್ಲಿರುವ ‘ಕೇದಾರೇಶ್ವರ ಮಹಾದೇವ ಮಂದಿರ ಟ್ರಸ್ಟ್’ನ ಭೂಮಿ ಅತಿಕ್ರಮಣ!

ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಟ್ರಸ್ಟ್ನ ಬೇಡಿಕೆ

ಮುಂಬಯಿ – ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಲೋವರ್ ಪಾರೆಲ್ ಪ್ರದೇಶದಲ್ಲಿರುವ ‘ಕೇದಾರೇಶ್ವರ ಮಹಾದೇವ ಮಂದಿರ ಟ್ರಸ್ಟ್’ನ ಅಮೂಲ್ಯ ಮತ್ತು ಐತಿಹಾಸಿಕ ಆಸ್ತಿಯನ್ನು (ಸರ್ವೇ ನಂ. 347) ಅಕ್ರಮವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದೆ. “ನಿರ್ಮಾಣ ಉದ್ಯಮಿ ಮತ್ತು ‘ಸ್ಕೈಲಾರ್ಕ್ ಬಿಲ್ಡರ್ಸ್’ನ ಸುಧಾಕರ ಶೆಟ್ಟಿ ಅವರು ಟ್ರಸ್ಟ್ ನ ಭೂಮಿಯನ್ನು ಸರ್ವೆ ಮಾಡುವ ನೆಪದಲ್ಲಿ ಟ್ರಸ್ಟ್ ಆಸ್ತಿಯನ್ನು ಅತಿಕ್ರಮಿಸಿದ್ದಾರೆ” ಎಂದು ಟ್ರಸ್ಟ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಟ್ರಸ್ಟ್ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ, ಅಲ್ಲದೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಕಟ್ಟಡ ನಿರ್ಮಾಣ ಉದ್ಯಮ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟ್ರಸ್ಟ್ ನ ಧರ್ಮದರ್ಶಿ ಶ್ರೀ. ರಾಹುಲ ಚತುರ್ವೇದಿ ಒತ್ತಾಯಿಸಿದ್ದಾರೆ. ಈ ಗಂಭೀರ ಪ್ರಕರಣದ ದೂರಿನ ಪ್ರತಿಯನ್ನು ಕೇಂದ್ರ ಸರಕಾರಕ್ಕೂ ಕಳುಹಿಸಲಾಗಿದೆ.