ಮೂರ್ತಿಗಳು, ಪಾತ್ರೆಗಳು, ಆಭರಣಗಳೂ ಕೂಡ ಲೂಟಿ!
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಗೋಪಾಲಗಂಜ್ ಜಿಲ್ಲೆಯ ಕೊಟ್ಲಿಪಾರಾ ಪ್ರದೇಶದಲ್ಲಿ ಜೂನ್ 13 ರಂದು ಮುಸಲ್ಮಾನರು ಹಿಂದೂಗಳ 6 ದೇವಸ್ಥಾನಗಳನ್ನು ಲೂಟಿ ಮಾಡಿದ್ದಾರೆ.
‘ಎನ್‌ಟಿವಿ ನ್ಯೂಸ್’ ವರದಿಯ ಪ್ರಕಾರ, ಒಬ್ಬ ಹಿಂದೂ ಮಹಿಳೆ ಹೇಳುವಂತೆ, ಜೂನ್ 12 ರಂದು ದುಯರೆಪಾರಾದಲ್ಲಿ ದೇವಸ್ಥಾನವನ್ನು ಲೂಟಿ ಮಾಡಲಾಗಿದೆ. ಇಂದು 5 ದೇವಸ್ಥಾನಗಳನ್ನು ಲೂಟಿ ಮಾಡಲಾಗಿದೆ. ಪೂಜೆಗಾಗಿ ಇರಿಸಲಾಗಿದ್ದ ಎಲ್ಲಾ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಯಾವಾಗಲೂ ಹೀಗೆ ನಡೆದರೆ, ನಾವು ಪ್ರತಿ ಬಾರಿ ಕಳ್ಳತನವಾದ ಪೂಜಾ ಸಾಮಗ್ರಿಗಳನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಹಿತ್ತಾಳೆ ಮತ್ತು ಕಂಚಿನ ಪಾತ್ರೆಗಳನ್ನು ಖರೀದಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಪ್ರತಿ ಬಾರಿ ಈ ವಸ್ತುಗಳನ್ನು ಖರೀದಿಸಲು ನಮ್ಮ ಬಳಿ ಹಣವಿಲ್ಲ. ನಮ್ಮ ಅಮೂಲ್ಯ ವಸ್ತುಗಳ ಲೂಟಿಯನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾನು ಸರಕಾರಕ್ಕೆ ಮನಪುರ್ವಕವಾಗಿ ವಿನಂತಿಸುತ್ತಿದ್ದೇನೆ. ಹಿಂದೂ ಸಮುದಾಯವು ತಮ್ಮ ಮೇಲಿನ ದೌರ್ಜನ್ಯಗಳನ್ನು ಸಹಿಸಲು ಸಾಧ್ಯವಿಲ್ಲ. ನಾವು ಈಗ ಹೇಗೆ ಬದುಕಬೇಕು? ನಾವು ಸರಕಾರದ ಗಮನ ಸೆಳೆಯುತ್ತಿದ್ದೇವೆ. ಅಪರಾಧಿಗಳನ್ನು ಹಿಡಿಯುವುದು ಸರಕಾರದ ಕೆಲಸ. ನಾವು ಅಸಹಾಯಕರಾಗಿದ್ದೇವೆ ಮತ್ತು ನಾವು ಏನನ್ನೂ ಮಾಡಲು ಸಾಧ್ಯವಿಲ್ಲ.
🚨Bangladesh: 6 Hindu temples looted by Mu$l!m$ within 24 hours!
🔸Idols, ornaments, and utensils stolen!
🔸Hindu homes vandalized in Netrokona district!
📌Such incidents keep happening in Bangladesh, yet Hindus in India and the world remain silent and indifferent!
PC:… pic.twitter.com/A3lAL05swh
— Sanatan Prabhat (@SanatanPrabhat) June 16, 2025
ನೆಟ್ರೊಕೋನಾ ಜಿಲ್ಲೆಯಲ್ಲಿ ಮುಸಲ್ಮಾನರಿಂದ ಹಿಂದೂಗಳ ಮನೆಗಳ ನಾಶ!
ಬಾಂಗ್ಲಾದೇಶದ ನೆಟ್ರೊಕೋನಾ ಜಿಲ್ಲೆಯ ಪುರಬಧಲಾ ಪ್ರದೇಶದಲ್ಲಿ ಹಿಂದೂಗಳ ಮನೆಗಳನ್ನು ಲೂಟಿ ಮಾಡಲಾಗಿದೆ. ಇಲ್ಲಿ ಹರಿದಾಸ್ ಸಮುದಾಯದ ಅನೇಕ ಹಿಂದೂ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಇಲ್ಲಿ ಮುಸಲ್ಮಾನರು ಇತ್ತೀಚೆಗೆ ಅವರ ಮನೆಗಳನ್ನು ನಾಶಪಡಿಸಿ, ಅವರ ವಸ್ತುಗಳನ್ನು ಲೂಟಿ ಮಾಡಿದ್ದಾರೆ.
ಜೂನ್ 1 ರಂದು ‘ಸೋಮೋಯ್ ನ್ಯಾಷನಲ್’ ಪ್ರಕಟಿಸಿದ ವರದಿಯ ಪ್ರಕಾರ, ಕಳೆದ ಹಲವಾರು ತಿಂಗಳಿಂದ ಈ ಪ್ರದೇಶದಲ್ಲಿ 500 ವರ್ಷಗಳಿಂದ ವಾಸಿಸುತ್ತಿದ್ದ ಹಿಂದೂ ಕುಟುಂಬಗಳನ್ನು ನಾಶಪಡಿಸಲು ಮತ್ತು ಅವರನ್ನು ಸ್ಥಳಾಂತರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈಗ ಮುಸಲ್ಮಾನರು ‘ಜನಬ್ ಅಲಿ ಮಾರ್ಕುಜನ್ ನೂರ್ ಅಲ್-ಇಸ್ಲಾಮಿಯಾ ಮದರಸಾ’ ಎಂಬ ಆಸ್ತಿಯ ರೂಪದಲ್ಲಿ ಈ ಪ್ರದೇಶವನ್ನು ಬದಲಾಯಿಸಿದ್ದಾರೆ. ಹಿಂದೂ ಕುಟುಂಬಗಳು ಸ್ಥಳೀಯ ಪೊಲೀಸರಿಗೆ ದೂರು ನೀಡಿದಾಗ, ಮುಸಲ್ಮಾನರು ಹಿಂದೂಗಳ ಮನೆಗಳ ಮೇಲೆ ದಾಳಿ ಮಾಡಿ ಲೂಟಿ ಮಾಡಿದರು.
ಓರ್ವ ಹಿಂದೂ ಸಂತ್ರಸ್ತರು ಮಾತನಾಡಿ, ಮುಸಲ್ಮಾನರು ಇಲ್ಲಿ ಮದರಸಾ ತೆರೆಯಲು ಬಯಸುತ್ತಾರೆ. ಇದರ ವಿರುದ್ಧ ಸಂತ್ರಸ್ತ ಹಿಂದೂ ಕುಟುಂಬಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಆಡಳಿತವು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ; ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಮತ್ತು ಭಾರತ ಸೇರಿದಂತೆ ಜಗತ್ತಿನಾದ್ಯಂತ ಹಿಂದೂಗಳು ನಿದ್ರೆಯಲ್ಲಿದ್ದಾರೆ! |