British Hindus Attacked By Muslims : ಲಂಡನ್‌ನಲ್ಲಿ ಮುಸ್ಲಿಮರಿಂದ 3 ಹಿಂದೂ ಯುವಕರಿಗೆ ಕ್ರೂರವಾಗಿ ಥಳಿತ

  • ಸಂಸದ ಬಾಬ್ ಬ್ಲಾಕಮನ್ ಇವರಿಂದ ಸಂಸತ್ತಿನಲ್ಲಿ ಮಂಡನೆ

  • ಇಲ್ಲಿಯವರೆಗೆ ಯಾರನ್ನು ಬಂಧಿಸಿಲ್ಲ

ಲಂಡನ್ (ಬ್ರಿಟನ್) – ಮೇ 30 ರಂದು ಲಂಡನ್‌ನಲ್ಲಿ ಮೂವರು ಹಿಂದೂ ಯುವಕರ ಮೇಲೆ ಸಾರ್ವಜನಿಕ ಉದ್ಯಾನವನದಲ್ಲಿ ಜನಾಂಗೀಯ ಮತ್ತು ಧಾರ್ಮಿಕ ದ್ವೇಷದಿಂದ ಮುಸ್ಲಿಮರು ಆಕ್ರಮಣ ಮಾಡಿ ಕ್ರೂರವಾಗಿ ಥಳಿಸಿದ್ದಾರೆ. ಹಲ್ಲೆಗೊಳಗಾದವರಲ್ಲಿ ಇಬ್ಬರು ಶ್ರೀಲಂಕಾ ಮೂಲದವರಾಗಿದ್ದರೆ, ಒಬ್ಬ ಭಾರತೀಯ ಮೂಲದ ಬ್ರಿಟಿಷ್ ಯುವಕನಾಗಿದ್ದನು. ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬನ ಕಣ್ಣಿನ ಮೂಳೆ ಮುರಿದಿದೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಅಥವಾ ಇದು ಧಾರ್ಮಿಕ ದ್ವೇಷದಿಂದ ಪ್ರೇರಿತವಾದ ಘಟನೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಬ್ರಿಟನ್ ಸಂಸತ್ತಿನ ‘ಹೌಸ್ ಆಫ್ ಕಾಮನ್ಸ್’ ನಲ್ಲಿ ಬ್ರಿಟನ್ ಸಂಸದ ಬಾಬ್ ಬ್ಲಾಕಮನ್ ಅವರು ಜೂನ್ 12 ರಂದು ಈ ವಿಷಯವನ್ನು ಪ್ರಸ್ತಾಪಿಸಿದರು. “ಜನಾಂಗೀಯ-ಧಾರ್ಮಿಕ ದ್ವೇಷದಿಂದ ಪ್ರೇರಿತವಾದ ಹಿಂಸಾಚಾರ” ಎಂದು ಅವರು ಈ ಘಟನೆಯನ್ನು ಬಣ್ಣಿಸಿದ್ದಾರೆ.

ಮಾಧ್ಯಮಗಳ ವರದಿಗಳ ಪ್ರಕಾರ, ಸಂತ್ರಸ್ತ ಯುವಕರಲ್ಲಿ ಒಬ್ಬನ ಸಹೋದರಿ, ತನ್ನ ಸಹೋದರ ದೇವಸ್ಥಾನದ ಪವಿತ್ರ ದಾರವನ್ನು ಕೈಗೆ ಕಟ್ಟಿಕೊಂಡಿದ್ದರಿಂದ ಆತನನ್ನು ಗುರಿಯಾಗಿಸಲಾಗಿರಬಹುದು ಎಂದು ಹೇಳಿದ್ದಾರೆ. ಈ ಹಲ್ಲೆಯು ಕೇವಲ ಜನಾಂಗೀಯವಲ್ಲದೆ, ಧಾರ್ಮಿಕ ದ್ವೇಷದಿಂದಲೂ ಪ್ರೇರಿತವಾಗಿತ್ತು.

ಸಂಪಾದಕೀಯ ನಿಲುವು

ಬ್ರಿಟನ್ ನಲ್ಲಿ ಮುಸಲ್ಮಾನರ ಹೆಚ್ಚುತ್ತಿರುವ ಜನಸಂಖ್ಯೆಯಿಂದ ರಾಜಕೀಯ ಪಕ್ಷಗಳು ಮತ್ತು ರಾಜರು ಕೂಡ ಅವರನ್ನು ಓಲೈಸುತ್ತಿದ್ದಾರೆ. ಬ್ರಿಟನ್ ಇಸ್ಲಾಮಿ ದೇಶದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದೆ. ಆದ್ದರಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಏನು ಘಟಿಸುತ್ತಿದೆ, ಅದು ಇನ್ನು ಮುಂದೆ ಇಲ್ಲಿ ಹಿಂದುಗಳಷ್ಟೇ ಅಲ್ಲದೆ, ಕ್ರೈಸ್ತರ ಸಂದರ್ಭದಲ್ಲಿ ಕೂಡ ಘಟಿಸುವುದು.