(ಡಿಎನ್‌ಎ ಎಂದರೆ ಡಿಆಕ್ಸಿರೈಬೋ ನ್ಯೂಕ್ಲಿಯಿಕ್ ಆಸಿಡ್, ಅಂದರೆ ವ್ಯಕ್ತಿಯ ಮೂಲ ಗುರುತನ್ನು ಪತ್ತೆಹಚ್ಚುವ ದೇಹದ ಅಂಶಗಳು. ಇದು ಆನುವಂಶಿಕ ಅಂಶಗಳನ್ನು (ಜೆನೆಟಿಕ್ ಮೆಟೀರಿಯಲ್) ರೂಪಿಸುವ ಅಣುಗಳು)

ಕರ್ಣಾವತಿ (ಗುಜರಾತ್): ಅಮಹದಾಬಾದ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಒಟ್ಟು 248 ಮೃತ ದೇಹಗಳಿಂದ ಡಿ.ಎನ್.ಎ. ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 22 ಮೃತದೇಹಗಳ ಡಿಎನ್‌ಎ ಮಾದರಿಗಳು ಅವರ ಸಂಬಂಧಿಕರೊಂದಿಗೆ ಹೊಂದಿಕೆಯಾಗಿದ್ದು, ಆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಈ ಅಪಘಾತದಲ್ಲಿ ವಿಮಾನದಲ್ಲಿನ ಪ್ರಯಾಣಿಕರು ಮತ್ತು ಇತರರು ಸೇರಿದಂತೆ ಒಟ್ಟು 295 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಬಂಧಿಸಿದ ಮೃತದೇಹಗಳನ್ನು ಆಂಬ್ಯುಲೆನ್ಸ್‌ಗಳ ಮೂಲಕ ಅವರ ಮನೆಗಳಿಗೆ ಕಳುಹಿಸಲಾಗುತ್ತಿದೆ. ಇದಕ್ಕಾಗಿ 230 ತಂಡಗಳನ್ನು ಸಿದ್ಧಪಡಿಸಲಾಗಿದ್ದು, ಈ ತಂಡಗಳು ಮೃತರ ಸಂಬಂಧಿಕರೊಂದಿಗೆ ಸಂಪರ್ಕದಲ್ಲಿವೆ.