ರವೀಂದ್ರನಾಥ ಠಾಗೋರರ ಪೂರ್ವಜರ ಮನೆಯನ್ನು ಧ್ವಂಸಗೊಳಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ!

ಬಾಂಗ್ಲಾದೇಶಕ್ಕೆ ಭಾರತದ ಆಗ್ರಹ

ನವದೆಹಲಿ – ಗುರುದೇವ ರವೀಂದ್ರನಾಥ ಠಾಕೂರ್ ಅವರ ಬಾಂಗ್ಲಾದೇಶದಲ್ಲಿರುವ ಪೂರ್ವಜರ ಮನೆಯನ್ನು ಮುಸ್ಲಿಮರು ಧ್ವಂಸಗೊಳಿಸಿದ ಘಟನೆಗೆ ಭಾರತದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಈ ದಾಳಿಯನ್ನು ನಡೆಸಿದವರ ವಿರುದ್ಧ ಬಾಂಗ್ಲಾದೇಶವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, “2025 ರ ಜೂನ್ 8 ರಂದು ರವೀಂದ್ರನಾಥ ಠಾಕೂರ್ ಅವರ ಪೂರ್ವಜರ ಮನೆಯ ಮೇಲೆ ಜನಸಮೂಹವೊಂದು ದ್ವೇಷಪೂರಿತ ದಾಳಿ ನಡೆಸಿದ ಘಟನೆಯನ್ನು ನಾವು ಖಂಡಿಸುತ್ತೇವೆ. ದಾಳಿಕೋರರು ನೊಬೆಲ್ ಪ್ರಶಸ್ತಿ ಪಾರಿತೋಷಕ ಸರ್ವತೋಮುಖ ತತ್ವಜ್ಞಾನಕ್ಕೆ ಅಪಮಾನ ಮಾಡಿದ್ದಾರೆ” ಎಂದು ಖಂಡಿಸಿದೆ.

ಸಂಪಾದಕೀಯ ನಿಲುವು

ಭಾರತ ಹೇಳಿದ್ದನ್ನು ಬಾಂಗ್ಲಾದೇಶ ಕೇಳುವುದಿಲ್ಲ, ಆದ್ದರಿಂದ ಭಾರತವು ಈಗ ಸ್ವತಃ ಸಕ್ರಿಯವಾಗುವ ಅವಶ್ಯಕತೆಯಿದೆ!