ನವದೆಹಲಿ – ಥೈಲ್ಯಾಂಡ್‌ನ ಫುಕೆಟ್ ನಗರದಿಂದ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾದ ‘AI 379’ ವಿಮಾನವನ್ನು ಫುಕೆಟ್ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇಳಿಸಲಾಯಿತು. ಈ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು.
Air India Bomb Threat: Flight AI-379 makes emergency landing in Thailand following bomb threat onboard.
PC: @MeghUpdates pic.twitter.com/W5gI8mCY4i
— Sanatan Prabhat (@SanatanPrabhat) June 13, 2025
ವಿಮಾನ ನಿಲ್ದಾಣದ ಅಧಿಕಾರಿಗಳು, ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ ಎಂದು ತಿಳಿಸಿದ್ದಾರೆ. ಈ ಬಾಂಬ್ ಬೆದರಿಕೆ ಬಂದಾಗ ವಿಮಾನದಲ್ಲಿ156 ಪ್ರಯಾಣಿಕರಿದ್ದರು. ವಿಮಾನದ ಸಂಪೂರ್ಣ ತಪಾಸಣೆ ಪೂರ್ಣಗೊಂಡ ನಂತರವೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.