Indore Love Jihad : ತನ್ನ ಗುರುತು ಮರೆಮಾಚಿ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಗೈದ ಯೂಸುಫ್ ಖಾನ್

ಯೂಸುಫ್ ಖಾನ್

ಇಂದೋರ್ (ಮಧ್ಯಪ್ರದೇಶ) – ಇಲ್ಲಿ ಯೂಸುಫ್ ಖಾನ್ ಎಂಬ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಗುರುತನ್ನು ಮರೆಮಾಚಿ ಹಿಂದೂ ಮಹಿಳೆಯೊಬ್ಬಳನ್ನು ಪ್ರೇಮ ಜಾಲಕ್ಕೆ ಸಿಲುಕಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಒತ್ತಡ ಹೇರಿದ್ದಾನೆ.

. ಯೂಸುಫ್ ಖಾನ್ ತಾನು ಮುಖೇಶ್ ಎಂದು ಸುಳ್ಳು ಹೇಳಿ ಹಿಂದೂ ಮಹಿಳೆಯೊಂದಿಗೆ ನಿಕಟ ಸಂಬಂಧ ಬೆಳೆಸಿದ್ದಾನೆ. ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

. ನಂತರ, ಸಂತ್ರಸ್ತ ಮಹಿಳೆಗೆ ಯೂಸುಫ್ ಖಾನ್‌ನ ನಿಜವಾದ ಗುರುತು ತಿಳಿದಾಗ, ಆಕೆ ಅವನನ್ನು ಪ್ರಶ್ನಿಸಿದ್ದಾಳೆ. ಆಗ ಯೂಸುಫ್ ಖಾನ್ ಆಕೆಯ ಮೇಲೆ ಒತ್ತಡ ಹೇರಿ, ಆಕೆಯ ವಿಡಿಯೋವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಮತಾಂತರಕ್ಕೆ ಒತ್ತಡ ಹೇರಿದ್ದಾನೆ. ಯೂಸುಫ್ ಖಾನ್ ಆಕೆಗೆ ಬೆದರಿಸಿ ಮಾನಸಿಕ ಮತ್ತು ದೈಹಿಕ ಶೋಷಣೆಯನ್ನು ಮುಂದುವರಿಸಿದ್ದಾನೆ.

. ಯೂಸುಫ್ ಖಾನ್‌ನ ಬೆದರಿಕೆಗೆ ಹೆದರಿ ಸಂತ್ರಸ್ತ ಮಹಿಳೆ ಹಿಂದೂ ಸಂಘಟನೆಯನ್ನು ಸಂಪರ್ಕಿಸಿದ್ದಾಳೆ.

. ಹಿಂದೂ ಸಂಘಟನೆಯ ಕಾರ್ಯಕರ್ತರು ಯೂಸುಫ್ ಖಾನ್‌ನನ್ನು ಹಿಡಿದು ಕನಾಡಿಯಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಕನಾಡಿಯಾ ಪೊಲೀಸರು ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಕನಿಷ್ಠ ಭಾಜಪ ಆಡಳಿತವಿರುವ ರಾಜ್ಯಗಳಾದರೂ ಲವ್ ಜಿಹಾದ್ ಮುಕ್ತವಾಗಬೇಕು ಎಂಬುದು ಹಿಂದೂಗಳ ನಿರೀಕ್ಷೆ! ಹಿಂದೂಗಳೂ ಇದಕ್ಕಾಗಿ ಮುಂದಾಗಬೇಕು!