(ಹಾಫಿಜ್ ಎಂದರೆ ಮದರಸಾದಲ್ಲಿ ಕುರಾನ್ ಕಲಿಸುವ ವ್ಯಕ್ತಿ)

ಹಾಪುರ್ (ಉತ್ತರ ಪ್ರದೇಶ) – ಇಲ್ಲಿನ ಒಂದು ಮದರಸಾದಲ್ಲಿ ಹಾಫಿಜನು ಓರ್ವ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಾಫಿಜ್ ವಸೀಮ್‌ನನ್ನು ಬಂಧಿಸಿದ್ದಾರೆ. ಆತ ಕಳೆದ 2 ತಿಂಗಳಿಂದ ಬಾಲಕಿಗೆ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುವ ಬೆದರಿಕೆ ಹಾಕಿ ಅತ್ಯಾಚಾರ ಎಸಗುತ್ತಿದ್ದ. ಅತ್ಯಾಚಾರದ ಸಮಯದಲ್ಲಿ ಆತ ಒಂದು ವಿಡಿಯೋವನ್ನು ಸಹ ಮಾಡಿದ್ದನು.
ಪೀಡಿತ ಬಾಲಕಿ ಮದರಸಾಗೆ ಹೋಗಲು ನಿರಾಕರಿಸಿದಾಗ, ಹಾಫಿಜ್ ಈ ವಿಡಿಯೋವನ್ನು ಪ್ರಸಾರ ಮಾಡಿದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 12, 2025 ರಂದು ಪೀಡಿತೆಯು ಪೊಲೀಸರಿಗೆ ದೂರು ನೀಡಿದಳು. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಾಫಿಜ್‌ನನ್ನು ಬಂಧಿಸಿದ್ದಾರೆ. ಹಾಫಿಜ್ ವಸೀಮ್ ಕಳೆದ 5 ವರ್ಷಗಳಿಂದ ಮದರಸಾದಲ್ಲಿ ಕುರಾನ್ ಕಲಿಸುತ್ತಿದ್ದಾನೆ. ಅವನಿಗೆ ಒಂದು ಕೋಣೆಯನ್ನು ಸಹ ನೀಡಲಾಗಿದೆ.
ಎರಡು ತಿಂಗಳ ಹಿಂದೆ ಆತ ಪೀಡಿತ ಬಾಲಕಿಗೆ ಪುಸ್ತಕ ತರಲು ತನ್ನ ಕೋಣೆಗೆ ಕಳುಹಿಸಿದ. ಆತ ಹಿಂಬಾಲಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ. ಈ ಸಮಯದಲ್ಲಿ ಆತ ಒಂದು ವಿಡಿಯೋವನ್ನು ಸಹ ಮಾಡಿದ್ದನು. ಪೀಡಿತ ಬಾಲಕಿಗೆ ಬೆದರಿಕೆ ಹಾಕಿ ಆತ ಅತ್ಯಾಚಾರ ಎಸಗುತ್ತಿದ್ದ. ಹಾಫಿಜ್ ಪೀಡಿತೆಗೆ, ಇದನ್ನು ಯಾರಿಗಾದರೂ ಹೇಳಿದರೆ, ಅವಳ ಕುಟುಂಬ ಸದಸ್ಯರನ್ನು ಕೊಲ್ಲುವುದಾಗಿ ಮತ್ತು ಅವಳ ಅಶ್ಲೀಲ ವಿಡಿಯೋವನ್ನು ಸಹ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಸಂಪಾದಕೀಯ ನಿಲುವುಇಂತಹ ಕಾಮುಕರ ವಿರುದ್ಧ ಇತರ ಮುಸ್ಲಿಂ ಧರ್ಮಗುರುಗಳು ಏಕೆ ಫತ್ವಾ ಹೊರಡಿಸುವುದಿಲ್ಲ? ಅಥವಾ ಇಂತಹ ಕೃತ್ಯಗಳನ್ನು ಸಮಸ್ತ ಮುಸ್ಲಿಮರು ಏಕೆ ಖಂಡಿಸುವುದಿಲ್ಲ? |