Britain PM Yunus Meeting Denied : ಬಾಂಗ್ಲಾದೇಶದ ಮಹಮ್ಮದ್ ಯೂನಸ್ ಅವರನ್ನು ಭೇಟಿಯಾಗಲು ನಿರಾಕರಿಸಿದ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್!

ಲಂಡನ್ – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನಸ್ ಅವರು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನು ಭೇಟಿಯಾಗಲು ಬಯಸಿದ್ದರು; ಆದರೆ ಸ್ಟಾರ್ಮರ್ ಅವರು ಭೇಟಿಯಾಗಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಮಹಮ್ಮದ್ ಯೂನಸ್ ಅವರು, ಬ್ರಿಟನ್ ದೇಶವು ಬಾಂಗ್ಲಾದೇಶಕ್ಕೆ ನೈತಿಕ ಮತ್ತು ಕಾನೂನು ನೆರವು ನೀಡಬೇಕು ಎಂದು ಆಗ್ರಹಿಸಿದ್ದರು; ಏಕೆಂದರೆ ಶೇಖ್ ಹಸೀನಾ ಅವರ 16 ವರ್ಷಗಳ ಆಡಳಿತದಲ್ಲಿ 234 ಶತಕೋಟಿ ಡಾಲರ್ ಲೂಟಿ ಮಾಡಲಾಗಿತ್ತು, ಇದರಲ್ಲಿ ಹೆಚ್ಚಿನ ಭಾಗ ಬ್ರಿಟನ್, ಕೆನಡಾ, ಸಿಂಗಾಪುರ ತಲುಪಿತ್ತು. ಮಹಮ್ಮದ್ ಯೂನಸ್ ಬ್ರಿಟನ್‌ನಲ್ಲಿ ಇದ್ದಾಗಲೂ ಕೂಡ ಬ್ರಿಟಿಷ್ ಪ್ರಧಾನಿ ಅವರನ್ನು ಭೇಟಿಯಾಗಲು ತಯಾರಿರಲಿಲ್ಲ. ಸ್ಟಾರ್ಮರ್ ಅವರು ಯೂನಸ್ ಅವರನ್ನು ಭೇಟಿಯಾಗಲು ನಿರಾಕರಿಸಿದ್ದು, ಕೇವಲ ಬಾಂಗ್ಲಾದೇಶಕ್ಕೆ ರಾಜತಾಂತ್ರಿಕ ಹಿನ್ನಡೆ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಯೂನಸ್ ಅವರ ಸ್ಥಾನ ಬಲವಾಗಿಲ್ಲ ಎಂಬುದನ್ನು ತೋರಿಸುತ್ತದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶಕ್ಕೆ ಅದರ ಸ್ಥಾನ ತೋರಿಸಿದ ಬ್ರಿಟನ್ !