Jaganath Temple Chief Priest Murdered : ಪುರಿ (ಒಡಿಶಾ) ಜಗನ್ನಾಥ ದೇಗುಲದ ಮುಖ್ಯ ಅರ್ಚಕರ ಭೀಕರ ಕೊಲೆ

ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ.

ಪುರಿ (ಒಡಿಶಾ) – ಜಗನ್ನಾಥ ದೇವಾಲಯದ ಮುಖ್ಯ ಅರ್ಚಕರಾದ ಜಗನ್ನಾಥ ದೀಕ್ಷಿತ್ ಅವರನ್ನು ಕೊಲೆ ಮಾಡಲಾಗಿದೆ. ವಿಚಿತ್ರವೆಂದರೆ ಪೊಲೀಸ್ ಭದ್ರತೆ ನಿಯೋಜಿಸಿದ್ದರೂ ಕೂಡ ಹಗಲು ಹೊತ್ತಿನಲ್ಲಿ ಮುಖ್ಯ ಅರ್ಚಕರನ್ನು ಕೊಲೆ ಮಾಡಿರುವುದು ಆಶ್ಚರ್ಯ ಮೂಡಿಸಿದೆ. ಈ ಘಟನೆಯಿಂದಾಗಿ ಪ್ರಸ್ತುತ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಕೊಲೆಯ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ಅರ್ಚಕರ ದೇಹವನ್ನು ಬಾಗಿಲಿನ ಹೊರಗೆ ಎಸೆಯುವುದು ಕಂಡುಬಂದಿದೆ. ದೇಹವನ್ನುಎಸೆಯತ್ತಿರುವಾಗ ಕಾಣುವ ವ್ಯಕ್ತಿ ಪತ್ ಜೋಷಿ ಎಂದು ಸ್ಥಳೀಯರು ವಿವರಿಸಿದ್ದಾರೆ. ಅರ್ಚಕರು ತಮ್ಮ ಹಣವನ್ನು ವಾಪಸ್ ಕೇಳಿದ ಕಾರಣಕ್ಕೆ ಆತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಪುರಿಯ  ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಅಗರ್ವಾಲ್ ಅವರು ಈ ಬಗ್ಗೆ ಮಾತನಾಡಿ, ಈ ಕೊಲೆ ವೈಯಕ್ತಿಕ ದ್ವೇಷದಿಂದ ನಡೆದಿದೆ. ಸಿಸಿಟಿವಿಯ  ದೃಶ್ಯಾವಳಿಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರವೇ ಕೊಲೆಯ ಹಿಂದಿನ ನಿಜವಾದ ಉದ್ದೇಶ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.