ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸರಕಾರ ಒಪ್ಪಂದವನ್ನು ರದ್ದುಪಡಿಸಬಹುದು! – ಕೇಂದ್ರ ಸರಕಾರ

ಭಾರತೀಯ ವಿಮಾನ ನಿಲ್ದಾಣಗಳಲ್ಲಿನ ಸಾಮಗ್ರಿಗಳ ಸಾಗಣೆಗಾಗಿ ಟರ್ಕಿಶ್ ಕಂಪನಿಯ ಗುತ್ತಿಗೆ ರದ್ದು

ನವದೆಹಲಿ – ಭಾರತದ ನಾಗರಿಕ ವಿಮಾನಯಾನ ಭದ್ರತಾ ವಿಭಾಗವು ಮೇ 15 ರಂದು ಟರ್ಕಿ ದೇಶದ ‘ಸೆಲೆಬಿ ಏರ್ಪೋರ್ಟ್ ಸರ್ವೀಸಸ್’ ಎಂಬ ಕಂಪನಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಪಡಿಸಿತ್ತು. ಈ ನಿರ್ಣಯದ ವಿರುದ್ಧ ಈ ಕಂಪನಿಯು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯು ಮೇ 22 ರಂದು ನಡೆಯಿತು. ವಿಚಾರಣೆಯ ವೇಳೆ ಕೇಂದ್ರ ಸರಕಾರವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು. ಭಾರತ ಸರಕಾರವು ಈ ಕಂಪನಿಗೆ ಭಾರತದ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಸಾಮಗ್ರಿಗಳ ಸಾಗಣೆ ಮಾಡುವ ಕಾರ್ಗೋ ವಿಮಾನಗಳ ಭದ್ರತೆಗೆ ಸಂಬಂಧಿಸಿದ ಗುತ್ತಿಗೆಯನ್ನು ನೀಡಿತ್ತು. ಈ ಕಂಪನಿಯು ವಿಮಾನದ ಮೂಲಕ ಕಳುಹಿಸಲಾಗುವ ಸಾಮಗ್ರಿಗಳ ವ್ಯವಹಾರವನ್ನು ನೋಡಿಕೊಳ್ಳುತ್ತದೆ.

ಸಾಲಿಸಿಟರ್ ಜನರಲ್ ಮೆಹ್ತಾ ಅವರು, ಭದ್ರತಾ ಗುತ್ತಿಗೆ ನೀಡುವಾಗ ಸರಕಾರವು ಸಂಪೂರ್ಣ ಅಧಿಕಾರವನ್ನು ತನ್ನ ಬಳಿ ಉಳಿಸಿಕೊಳ್ಳುತ್ತದೆ ಎಂದು ಹೇಳಿದರು. ಈ ಒಪ್ಪಂದವನ್ನು ಯಾವುದೇ ಸಮಯದಲ್ಲಿ ರದ್ದುಪಡಿಸಬಹುದು. ಇದರಲ್ಲಿ ತಪ್ಪಿರಬಹುದು; ಆದರೆ ರಾಷ್ಟ್ರೀಯ ವಿಪತ್ತು ಅಥವಾ ಭದ್ರತಾ ಅಪಾಯದ ಸಂದರ್ಭದಲ್ಲಿ ಸರಕಾರ ಇಂತಹ ನಿರ್ಧಾರ ತೆಗೆದುಕೊಳ್ಳಬಹುದು ಎಂದು ವಿವರಿಸಿದರು.

ಸಂಪಾದಕೀಯ ನಿಲುವು

ಮೂಲತಃ, ಭಾರತವು ಟರ್ಕಿಶ್ ಕಂಪನಿಗೆ ವಿಮಾನ ನಿಲ್ದಾಣಗಳ ಭದ್ರತೆಯ ಗುತ್ತಿಗೆಯನ್ನು ನೀಡಿದ್ದಾದರೂ ಹೇಗೆ? ಭಾರತವೇ ಏಕೆ ಭದ್ರತೆ ಒದಗಿಸಬಾರದು?