೩೦೦ ಮುಸ್ಲಿಂ ನೌಕರರನ್ನು ತೆಗೆದುಹಾಕಿ ದೇವಸ್ಥಾನದ ಸಾತ್ವಿಕತೆಯನ್ನು ಕಾಪಾಡುವಂತೆ ಮಹಾರಾಷ್ಟ್ರ ಮಂದಿರ ಮಹಾಸಂಘದ ಆಗ್ರಹ.

ಅಹಮದ್‌ನಗರ – ಕೋಟಿಗಟ್ಟಲೆ ಹಿಂದೂಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಶನಿ ಶಿಂಗಣಾಪುರ ದೇವಾಲಯದ ಪವಿತ್ರ ಕಟ್ಟೆಯ ಮೇಲೆ ಮೇ ೨೧ ರಂದು ಮುಸ್ಲಿಂ ಕಾರ್ಮಿಕರಿಂದ ‘ಗ್ರಿಲ್’ ಅಳವಡಿಸುವ ಕೆಲಸ ಮಾಡಲಾಗಿದೆ. ಈ ಘಟನೆ ಅತ್ಯಂತ ಆಘಾತಕಾರಿಯಾಗಿದ್ದು, ದೇವಸ್ಥಾನದ ಸಾತ್ವಿಕತೆ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಉಲ್ಲಂಘಿಸುವಂತದ್ದಾಗಿದೆ. ಇದರಿಂದ ಸ್ಥಳೀಯ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈ ಘಟನೆಯನ್ನು ಮಹಾರಾಷ್ಟ್ರ ಮಂದಿರ ಮಹಾಸಂಘವು ತೀವ್ರವಾಗಿ ಖಂಡಿಸಿದೆ ಮತ್ತು ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನೀಲ ಘನವಟ್ ಅವರು, ಸಂಬಂಧಪಟ್ಟ ಮುಸ್ಲಿಂ ಕಾರ್ಮಿಕರ ಕೆಲಸವನ್ನು ಕೂಡಲೇ ನಿಲ್ಲಿಸಬೇಕು. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ೩೦೦ ಮುಸ್ಲಿಂ ನೌಕರರನ್ನು ತೆಗೆದುಹಾಕಬೇಕು, ಹಾಗೆಯೇ ಅವರಿಗೆ ಪ್ರವೇಶ ನೀಡಿದ ಜವಾಬ್ದಾರಿಯುತ ಅಧಿಕಾರಿಗಳ ಕುರಿತು ಆಳವಾದ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಜನ ಆಂದೋಲನವನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
🚨 Shani Shingnapur Temple Sanctity Violated! 🚨
300 Muslim workers allowed on the sacred platform of Shani Mandir! 🛕😡
Maharashtra Mandir Mahasangh demands their removal to protect temple sanctity.
⚠️ This is a wake-up call against Govt control & forced ‘secularization’ of… pic.twitter.com/MoaLcF6OCT
— Sanatan Prabhat (@SanatanPrabhat) May 22, 2025
ಶ್ರೀ. ಘನವಟ್ ಅವರು ಮುಂದೆ ಮಾತನಾಡಿ:
೧. ಶನಿ ಶಿಂಗಣಾಪುರದಂತಹ ಪವಿತ್ರ ದೇವಸ್ಥಾನದಲ್ಲಿ ಮಾಂಸಾಹಾರ ಸೇವಿಸುವ ಇತರ ಧರ್ಮೀಯ ವ್ಯಕ್ತಿಗಳಿಗೆ ಕೆಲಸ ನೀಡುವುದು ಹಿಂದೂ ಸಮಾಜದ ಶ್ರದ್ಧೆ ಮತ್ತು ಸಂಪ್ರದಾಯಗಳ ಮೇಲಿನ ದೊಡ್ಡ ಆಘಾತವಾಗಿದೆ. ಪ್ರಸ್ತುತ ದೇವಸ್ಥಾನದಲ್ಲಿ ಸುಮಾರು ೩೦೦ ಮುಸ್ಲಿಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ದೇವಸ್ಥಾನದೊಳಗೆ ಕೆಲಸಕ್ಕೆ ಇಟ್ಟುಕೊಳ್ಳುವುದು ಧಾರ್ಮಿಕ ಸಂಪ್ರದಾಯಗಳು ಮತ್ತು ದೇವಸ್ಥಾನದ ಸಾತ್ವಿಕತೆಯ ಮೇಲೆ ನೇರ ಆಕ್ರಮಣವಾಗಿದೆ.
೨. ಈ ವಿಷಯದಲ್ಲಿ ಮಹಾರಾಷ್ಟ್ರ ಮಂದಿರ ಮಹಾಸಂಘವು ದೇವಸ್ಥಾನದ ಧರ್ಮದರ್ಶಿಗಳೊಂದಿಗೆ ಸಂಪರ್ಕ ಮಾಡಿ ಈ ಕೆಲಸವನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿತು. ಧರ್ಮದರ್ಶಿಗಳು ಕೆಲಸವನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಆದರೂ, ಈ ಕೆಲಸವನ್ನು ನೀಡಿದ ಮತ್ತು ಮುಸ್ಲಿಂ ಕಾರ್ಮಿಕರನ್ನು ನೇಮಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ.
೩. ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನದಲ್ಲೂ ಇಂತಹದ್ದೇ ಘಟನೆ ನಡೆದಾಗ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿಂದೂ ನೌಕರರನ್ನು ಮಾತ್ರ ನೇಮಿಸುವಂತೆ ಆದೇಶಿಸಿದ್ದರು. ಮಹಾರಾಷ್ಟ್ರ ಸರಕಾರವೂ ಕೂಡಲೇ ಇದೇ ರೀತಿಯ ದೃಢ ನಿಲುವನ್ನು ತೆಗೆದುಕೊಳ್ಳಬೇಕು.
೪. ಹಿಂದೂ ದೇವಸ್ಥಾನದಲ್ಲಿ ವ್ಯಕ್ತಿಗಳ ಆಚಾರ, ಆಹಾರ, ಶ್ರದ್ಧೆ ಮತ್ತು ಭಾವನೆಗಳು ಆ ಪವಿತ್ರತೆಗೆ ಅನುಗುಣವಾಗಿರಬೇಕು. ಅಂತಹ ಪವಿತ್ರ ಸ್ಥಳದಲ್ಲಿ ಅದನ್ನು ಪಾಲಿಸದ ಇತರ ಧರ್ಮೀಯ ನೌಕರರನ್ನು ನೇಮಿಸುವುದು ದೇವಸ್ಥಾನದ ಧಾರ್ಮಿಕ ಶುದ್ಧತೆ ಮತ್ತು ಸಂಪ್ರದಾಯಗಳ ಮೇಲಿನ ಆಕ್ರಮಣವಾಗಿದೆ ಮತ್ತು ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
ಸಂಪಾದಕೀಯ ನಿಲುವು
|