Hindu Temple’s Land Occupied : ಪಾಕಿಸ್ತಾನದಲ್ಲಿ ೧೦೦ ವರ್ಷಗಳ ಹಳೆಯ ಶಿವ ದೇವಸ್ಥಾನದ ಭೂಮಿ ಅತಿಕ್ರಮಣಕ್ಕೆ ಒಳಗಾಗಿದೆ!

ಶಿವ ಕಚ್ಚಿ, ‘ದರ್ವಾರ್ ಇತ್ತೆಹಾದ್ ಪಾಕಿಸ್ತಾನ್’ ಮುಖ್ಯಸ್ಥ

ಇಸ್ಲಾಮಾಬಾದ್ – ಪಾಕಿಸ್ತಾನದ ಸಿಂಧ ಪ್ರಾಂತ್ಯದ ತಾಂಡೋ ಜಾಮ್ ನಗರದ ಸಮೀಪವಿರುವ ೧೦೦ ವರ್ಷಗಳ ಹಳೆಯ ಶಿವ ದೇವಾಲಯದ ಭೂಮಿಯನ್ನು ಅತಿಕ್ರಮಿಸಲಾಗಿದೆ. ಅಷ್ಟೇ ಅಲ್ಲ, ಅದರ ಸುತ್ತಲೂ ನಿರ್ಮಾಣ ಕಾರ್ಯವನ್ನೂ ಪ್ರಾರಂಭಿಸಲಾಗಿದೆ. ಹಿಂದೂ ಸಮುದಾಯವನ್ನು ಪ್ರತಿನಿಧಿಸುವ ‘ದರ್ಬಾರ್ ಇತ್ತೆಹಾದ್ ಪಾಕಿಸ್ತಾನ್’ ಸಂಘಟನೆಯು ಇತ್ತೀಚೆಗೆ ಈ ಅಕ್ರಮ ನಿರ್ಮಾಣವನ್ನು ನಿಲ್ಲಿಸುವಂತೆ ಸರಕಾರಕ್ಕೆ ಮನವಿ ಮಾಡಿದೆ. (ಈ ಮನವಿಗೆ ಕಿವಿಗೊಡಲಾಗುವುದಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! – ಸಂಪಾದಕರು)

. ಈ ಸಂಘಟನೆಯ ಮುಖ್ಯಸ್ಥರಾದ ಶಿವಾ ಕಚ್ಚಿ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿ, ಹಿಂದೂ ದೇವಾಲಯದ ಭೂಮಿಯನ್ನು ಕಬಳಿಸಿದವರು ದೇವಾಲಯದ ಸುತ್ತ-ಮುತ್ತಲಿನ ಭೂಮಿಯಲ್ಲಿ ಅಕ್ರಮ ನಿರ್ಮಾಣವನ್ನು ಪ್ರಾರಂಭಿಸಿದ್ದಾರೆ ಮತ್ತು ಶಿವ ದೇವಸ್ಥಾನಕ್ಕೆ ಹೋಗುವ ರಸ್ತೆಗಳು ಮತ್ತು ಪ್ರವೇಶದ್ವಾರವನ್ನು ನಿರ್ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.

. ದೇವಸ್ಥಾನದ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಕಳೆದ ವರ್ಷ ಸಿಂಧ ಪರಂಪರಾ ವಿಭಾಗದ ತಂಡವು ದೇವಸ್ಥಾನವನ್ನು ನವೀಕರಿಸಿತ್ತು ಎಂದು ಶಿವಾ ಅವರು ತಿಳಿಸಿದರು. ಸಿಂಧನಲ್ಲಿ ಅನೇಕ ಐತಿಹಾಸಿಕ ಹಿಂದೂ ದೇವಾಲಯಗಳಿವೆ ಮತ್ತು ಅವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಸರಕಾರದ ಕರ್ತವ್ಯ ಎಂದು ಅವರು ಆಗ್ರಹಿಸಿದರು.

. ದೇವಸ್ಥಾನದ ಸಮೀಪ ಹಿಂದೂ ಸ್ಮಶಾನ ಕೂಡ ಇದೆ. ಇಲ್ಲಿ ವಾರ್ಷಿಕ ಧಾರ್ಮಿಕ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ಭೂ ಮಾಫಿಯಾಗಳು ದೇವಸ್ಥಾನದ ಸುತ್ತ-ಮುತ್ತಲಿನ ಭೂಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ಶಿವಾ ಅವರು ಆರೋಪಿಸಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನಗಳು ಅಸುರಕ್ಷಿತ!