ಇಂದೋರ್ (ಮಧ್ಯಪ್ರದೇಶ) – ಶೂಟಿಂಗ್ ತರಬೇತುದಾರ ಮೊಹ್ಸಿನ್ ಖಾನ್‌ನನ್ನು ಹಿಂದೂ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆಯು ಹಿಂದೂ ಸಂಘಟನೆಗಳ ಸಹಾಯದಿಂದ ಮೊಹ್ಸಿನ್ ಖಾನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು.
1. ಮೊಹ್ಸಿನ್ ಖಾನ್ ನಗರದಲ್ಲಿ ‘ಡ್ರೀಮ್ ಒಲಿಂಪಿಕ್ ಶೂಟಿಂಗ್ ಅಕಾಡೆಮಿ’ ನಡೆಸುತ್ತಿದ್ದಾನೆ. ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳು, “ನಾನು 2021 ರಿಂದ ನವೆಂಬರ್ 2023 ರವರೆಗೆ ಈ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೆ. ಈ ಅವಧಿಯಲ್ಲಿ, ತರಬೇತುದಾರ ಮೊಹ್ಸಿನ್ ಖಾನ್ ನನಗೆ ಶೂಟಿಂಗ್ ಕಲಿಸುವ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸುತ್ತಿದ್ದನು. ನಾನು ಇದನ್ನು ವಿರೋಧಿಸಿದಾಗ, ಅವನು ನನ್ನ ವೃತ್ತಿಜೀವನವನ್ನು ಹಾಳುಮಾಡುವುದಾಗಿ ಬೆದರಿಕೆ ಹಾಕಿದನು” ಎಂದು ಹೇಳಿದ್ದಾಳೆ.
2. ಮೊಹ್ಸಿನ್ ಖಾನ್‌ನ ಭಯದಿಂದ ಆಕೆ ಅಕಾಡೆಮಿಗೆ ಹೋಗುವುದನ್ನು ನಿಲ್ಲಿಸಿದಳು. ನಂತರ, ಮೊಹ್ಸಿನ್ ಇತರ ಹಿಂದೂ ವಿದ್ಯಾರ್ಥಿನಿಯರೊಂದಿಗೂ ಇದೇ ರೀತಿ ನಡೆದುಕೊಂಡಿರುವುದು ಬಹಿರಂಗವಾಯಿತು.
3. ಪೊಲೀಸರು ಮೊಹ್ಸಿನ್‌ನನ್ನು ‘ಪೋಕ್ಸೋ’ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದಾರೆ. ಅವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.
4. ಪೊಲೀಸರ ಪ್ರಕಾರ, ಆರೋಪಿಯ ಮೊಬೈಲ್ ಫೋನ್‌ನಲ್ಲಿ ಹಲವು ಅಶ್ಲೀಲ ವೀಡಿಯೊಗಳೂ ಪತ್ತೆಯಾಗಿವೆ.
ಸಂಪಾದಕೀಯ ನಿಲುವುಇಂತಹವರ ವಿರುದ್ಧ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸುವುದು ಅವಶ್ಯಕ! |