ಇಸ್ಲಾಮಾಬಾದ್ – ಪಾಕಿಸ್ತಾನ ಸರಕಾರವು ಇತ್ತೀಚೆಗೆ ಭಾರತೀಯ ಹೈಕಮಿಷನ್‌ನ ಅಧಿಕಾರಿಯೊಬ್ಬರಿಗೆ ದೇಶ ತೊರೆಯುವಂತೆ ಆದೇಶಿಸಿದೆ. ಮೇ 13 ರಂದು ಭಾರತವು ಪಾಕಿಸ್ತಾನದ ಹೈಕಮಿಷನ್‌ನ ಅಧಿಕಾರಿಯೊಬ್ಬರನ್ನು ಹೊರಹಾಕಿತ್ತು. ಪಾಕಿಸ್ತಾನಿ ಅಧಿಕಾರಿಗೆ 24 ಗಂಟೆಗಳ ಒಳಗೆ ದೇಶ ತೊರೆಯುವಂತೆ ಭಾರತ ಆದೇಶಿಸಿತ್ತು. ಭಾರತದ ಈ ಕ್ರಮಕ್ಕೆ ಪ್ರತಿಕಾರವಾಗಿ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.
ನವದೆಹಲಿಯ ಪಾಕಿಸ್ತಾನಿ ರಾಯಭಾರ ಕಚೇರಿಯ ಅಧಿಕಾರಿ ಡ್ಯಾನಿಶ್ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್‌ಐ’ ಗೆ ಸಂಬಂಧಿಸಿರುವುದು ಕಂಡುಬಂದಿತ್ತು. ಡ್ಯಾನಿಶ್‌ಗೆ ಬೇಹುಗಾರಿಕೆಯ ಆರೋಪದ ಮೇಲೆ ಸಿಕ್ಕಿಬಿದ್ದ ಭಾರತೀಯ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಮತ್ತು ಹರಿಯಾಣದಿಂದ ಬಂಧಿಸಲ್ಪಟ್ಟ ಅನೇಕ ಬೇಹುಗಾರರೊಂದಿಗೆ ಸಂಬಂಧವಿರುವುದು ಬಹಿರಂಗವಾಗಿತ್ತು.