PM Modi Statement : ಮೋದಿಯ ನರಗಳಲ್ಲಿ ರಕ್ತವಲ್ಲ, ಬಿಸಿ ಸಿಂದೂರ ಹರಿಯುತ್ತಿದೆ!

ಪ್ರಧಾನಿ ಮೋದಿಯಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಬಿಕಾನೇರ (ರಾಜಸ್ಥಾನ) – ಭಾರತೀಯರ ಜೀವದೊಂದಿಗೆ ಚೆಲ್ಲಾಟವಾಡುವವರನ್ನು ಸುಮ್ಮನೆ ಬಿಡುವುದಿಲ್ಲ. ಭಾರತ ಅಣುಬಾಂಬ್ ಬೆದರಿಕೆಗಳಿಗೆ ಹೆದರುವುದಿಲ್ಲ. ಯಾರು ಭಾರತದ ರಕ್ತ ಹರಿಸಿದರೋ ಅವರ ಪ್ರತಿ ಹನಿಗೂ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ತೀಕ್ಷ್ಣವಾಗಿ ಎಚ್ಚರಿಸಿದರು. “ಮೋದಿಯ ರಕ್ತ ಬಿಸಿಯಾಗಿದೆ. ಈಗ ಮೋದಿ ನರಗಳಲ್ಲಿ ರಕ್ತವಲ್ಲ, ಬಿಸಿ ಸಿಂದೂರ ಹರಿಯುತ್ತಿದೆ” ಎಂದು ಅವರು ಹೇಳಿದರು. ಅವರು ಇಲ್ಲಿನ ಭಾರತೀಯ ಗಡಿಭಾಗದ ದೆಶನೋಕ ಪ್ರದೇಶದ ಪಾಲನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಮಂಡಿಸಿದ ವಿಷಯಗಳು

1. ಸಿಂದೂರ ಮದ್ದುಗುಂಡುಗಳಾಗಿ ಮಾರ್ಪಟ್ಟಾಗ ಏನಾಗುತ್ತದೆ ಎಂಬುದನ್ನು ಜಗತ್ತು ನೋಡಿದೆ!

ಪಹಲ್ಗಾಮನಲ್ಲಿ ಸಹೋದರಿಯರ ಸಿಂದೂರ ಅಳಿಸಿದರು. ಗುಂಡು ಹಾರಿಸಲಾಯಿತು, ಆ ಗುಂಡುಗಳು 140 ಕೋಟಿ ದೇಶವಾಸಿಗಳ ಹೃದಯವನ್ನು ಹೊಕ್ಕವು. ಮೂರೂ ಸೇನೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಮತ್ತು ಮೂರೂ ಸೇನೆಗಳು ಪಾಕಿಸ್ತಾನವನ್ನು ಶರಣಾಗುವಂತೆ ಮಾಡಿತು. ನಾವು 22 ನಿಮಿಷಗಳಲ್ಲಿ 9 ಅತಿದೊಡ್ಡ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆವು. ಸಿಂದೂರವು ಮದ್ದುಗುಂಡುಗಳಾಗಿ ಮಾರ್ಪಟ್ಟಾಗ ಏನಾಗುತ್ತದೆ ಎಂಬುದನ್ನು ಜಗತ್ತು ನೋಡಿತು.

2. ಮೂರು ತತ್ವಗಳ ಮೂಲಕ ಭಯೋತ್ಪಾದನೆಯನ್ನು ನಿಗ್ರಹಿಸುತ್ತೇವೆ!

ಭಯೋತ್ಪಾದನೆಯನ್ನು ಎದುರಿಸಲು ‘ಆಪರೇಷನ ಸಿಂದೂರ’ 3 ತತ್ವಗಳನ್ನು ಮಂಡಿಸಿತು. ಮೊದಲನೆಯದು, ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ, ಅದಕ್ಕೆ ಸರಿಯಾದ ಉತ್ತರ ನೀಡಲಾಗುವುದು. ಸಮಯವನ್ನು ನಮ್ಮ ಸೇನೆ ನಿರ್ಧರಿಸುತ್ತದೆ, ವಿಧಾನವನ್ನೂ ಸೇನೆಯೇ ನಿರ್ಧರಿಸುತ್ತದೆ ಮತ್ತು ಪರಿಸ್ಥಿತಿಯೂ ನಮ್ಮದೇ ಆಗಿರುತ್ತದೆ. ಎರಡನೆಯದು, ಭಾರತ ಅಣುಬಾಂಬ್ ಬೆದರಿಕೆಗಳಿಗೆ ಹೆದರುವುದಿಲ್ಲ. ಮೂರನೆಯದು, ನಾವು ಭಯೋತ್ಪಾದನೆಯ ರೂವಾರಿಗಳು ಮತ್ತು ಭಯೋತ್ಪಾದನೆಗೆ ಆಶ್ರಯ ನೀಡುವ ಸರಕಾರವನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ನಾವು ಅವರಿಗೂ ಅದೇ ರೀತಿ ಪರಿಗಣಿಸುತ್ತೇವೆ.

3. ಮೋದಿ ಮನಸ್ಸು ತಣ್ಣಗಿದ್ದರೆ ರಕ್ತ ಬಿಸಿಯಾಗಿದೆ!

ಪಾಕಿಸ್ತಾನ ಎಂದಿಗೂ ಭಾರತದ ವಿರುದ್ಧ ನೇರ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ; ಅದಕ್ಕಾಗಿಯೇ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಅಸ್ತ್ರವಾಗಿ ಬಳಸಲಾಗಿದೆ. ಪಾಕಿಸ್ತಾನ ಒಂದು ವಿಷಯವನ್ನು ಮರೆತಿದೆ, ಈಗ ಭಾರತಮಾತೆಯ ಸೇವಕ ಮೋದಿ ಇಲ್ಲಿ ತಲೆ ಎತ್ತಿ ನಿಂತಿದ್ದಾರೆ. ಮೋದಿ ಮನಸ್ಸು ತಂಪಾಗಿದೆ, ಅದು ತಂಪಾಗಿಯೇ ಇರುತ್ತದೆ; ಆದರೆ ಮೋದಿ ರಕ್ತ ಬಿಸಿಯಾಗಿದೆ. ಈಗ ಮೋದಿ ನರಗಳಲ್ಲಿ ರಕ್ತವಲ್ಲ, ಬಿಸಿ ಸಿಂದೂರ ಹರಿಯುತ್ತಿದೆ.

4. ಭಾರತೀಯರ ರಕ್ತದೊಂದಿಗೆ ಆಟವಾಡುವುದು ಪಾಕಿಸ್ತಾನಕ್ಕೆ ದುಬಾರಿಯಾಗಲಿದೆ!

ಪ್ರತಿಯೊಂದು ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಭಾರತ ಸ್ಪಷ್ಟಪಡಿಸಿದೆ. ಈ ಬೆಲೆಯನ್ನು ಪಾಕಿಸ್ತಾನದ ಸೇನೆ ಮತ್ತು ಪಾಕಿಸ್ತಾನದ ಆರ್ಥಿಕತೆ ತೆರಬೇಕಾಗುತ್ತದೆ. ಪಾಕಿಸ್ತಾನದೊಂದಿಗೆ ಚರ್ಚೆಯಾದರೆ, ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಭಯೋತ್ಪಾದನೆ ಕುರಿತಾಗಿ ಮಾತ್ರ ಇರುತ್ತದೆ. ಭಾರತೀಯರ ರಕ್ತದೊಂದಿಗೆ ಆಟವಾಡುವುದು ಪಾಕಿಸ್ತಾನಕ್ಕೆ ದುಬಾರಿಯಾಗಲಿದೆ ಎಂಬುದು ಭಾರತದ ದೃಢ ನಿರ್ಧಾರವಾಗಿದೆ. ಈ ಸಂಕಲ್ಪದಿಂದ ನಮ್ಮನ್ನು ತಡೆಯಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ.