Chhattisgarh Naxal Encounter : ಛತ್ತೀಸಗಢದಲ್ಲಿ ಚಕಮಕಿ: 27 ನಕ್ಸಲರ ಹತ್ಯೆ

ಒಂದೂವರೆ ಕೋಟಿ ರೂಪಾಯಿ ಬಹುಮಾನ ಘೋಷಿಸಲ್ಪಟ್ಟಿದ್ದ ನಕ್ಸಲ್ ಬಸವರಾಜು ಹತ್ಯೆ

ಜಗದಲಪುರ (ಛತ್ತೀಸಗಢ): ಇಲ್ಲಿನ ಅಬುಝಮಾಡ ಅರಣ್ಯದಲ್ಲಿ ಮೇ 21ರಂದು ಬೆಳಿಗ್ಗೆ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 27 ನಕ್ಸಲರನ್ನು ಹತ್ಯೆ ಮಾಡಿದೆ. ಹತ್ಯೆಗೀಡಾದವರ ಪೈಕಿ 20 ಮಂದಿಯ ಶವಗಳು ಮತ್ತು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಹತರಾದ ನಕ್ಸಲರಲ್ಲಿ ಪ್ರಮುಖ ನಕ್ಸಲನಾಗಿರುವ ಬಸವರಾಜು ಕೂಡ ಸೇರಿದ್ದಾನೆ. ಅವನ ಬಗ್ಗೆ ಮಾಹಿತಿ ನೀಡಿದವರಿಗೆ ಒಂದೂವರೆ ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ದಂತೇವಾಡ, ನಾರಾಯಣಪುರ ಮತ್ತು ವಿಜಾಪುರ ಜಿಲ್ಲೆಗಳ ಗಡಿಯಲ್ಲಿ ಈ ಚಕಮಕಿ ನಡೆಯಿತು.

ಪೊಲೀಸರು ಏಳು ದಿನಗಳ ಹಿಂದೆ ‘ಕರೆಗುಟ್ಟಾ ಆಪರೇಷನ್’ ಬಗ್ಗೆ ಮಾಹಿತಿ ನೀಡಿದ್ದರು. ಇದರ ಅಡಿಯಲ್ಲಿ ಛತ್ತೀಸ್ಗಢ-ತೆಲಂಗಾಣ ಗಡಿಯ ಕರೆಗುಟ್ಟಾ ಬೆಟ್ಟಗಳಲ್ಲಿ 24 ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 31 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಇದರಲ್ಲಿ 16 ಮಹಿಳೆಯರು ಮತ್ತು 15 ಪುರುಷ ನಕ್ಸಲರು ಸೇರಿದ್ದಾರೆ.