ಸನಾತನ ಹಿಂದೂ ರಾಷ್ಟ್ರ ಶಂಖನಾದ ಮಹೋತ್ಸವಕ್ಕಾಗಿ ಗೋವಾಕ್ಕೆ ಆಗಮಿಸಿದ್ದ ವಕೀಲ ನಿರಂಜನ್ ಚೌಧರಿ ಮತ್ತು ‘ಸನಾತನ ಸಾರಥಿ’ಯ ಕಿರಣ ಮಾಳಿ ಅವರ ಸನ್ನದ್ಧತೆ !

ಮಡಗಾಂವ ರೈಲು ನಿಲ್ದಾಣದಲ್ಲಿನ ವಿಕಲಚೇತನರ ಶೌಚಾಲಯದ ದುಸ್ಥಿತಿಯ ಬಗ್ಗೆ ರೈಲ್ವೆ ಆಡಳಿತದ ಗಮನ ಸೆಳೆದರು!

ಮಡಗಾಂವ (ಗೋವಾ), ಮೇ ೨೦ (ವಾರ್ತಾ) – ಸನಾತನ ಹಿಂದೂ ರಾಷ್ಟ್ರ ಶಂಖನಾದ ಮಹೋತ್ಸವಕ್ಕಾಗಿ ಜಲಗಾಂವ್‌ನಿಂದ ಗೋವಾಕ್ಕೆ ಆಗಮಿಸಿದ್ದ ವಕೀಲ ನಿರಂಜನ ಚೌಧರಿ ಅವರು ಮಡಗಾಂವ ರೈಲು ನಿಲ್ದಾಣದಲ್ಲಿನ ವಿಕಲಚೇತನ ಪ್ರಯಾಣಿಕರ ಶೌಚಾಲಯ ಅತ್ಯಂತ ದುಸ್ಥಿತಿಯನ್ನು ಕಂಡು, ಕೂಡಲೇ ವಿಡಿಯೋ ಮೂಲಕ ರೈಲ್ವೆ ಆಡಳಿತದ ಗಮನ ಸೆಳೆದಿದ್ದಾರೆ.

ವಕೀಲ ನಿರಂಜನ್ ಚೌಧರಿ

೧. ಶೌಚಾಲಯದ ಬೀಗ ಮುರಿದಿದ್ದು, ಅಲ್ಲಿ ಸ್ವಚ್ಛತೆ ಇರಲಿಲ್ಲ. ಪ್ಲಾಟ್‌ಫಾರ್ಮ್ ಸಂಖ್ಯೆ ೧ ರಲ್ಲಿನ ಮೇಲ್ಛಾವಣಿಯಿಂದ ಮಳೆನೀರು ನೇರವಾಗಿ ಸೋರುತ್ತಿದ್ದು, ಪ್ರಯಾಣಿಕರಿಗೆ ಬಹಳ ತೊಂದರೆಯಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ‘ಸನಾತನ ಸಾರಥಿ ನ್ಯೂಸ್’ನ ಪ್ರತಿನಿಧಿ ಕಿರಣ ಮಾಳಿ ಅವರೂ ಸನ್ನದ್ಧತೆ ತೋರಿಸಿ, ಇದರ ವಿಡಿಯೋವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಗಂಭೀರ ವಿಷಯವನ್ನು ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರ ಗಮನಕ್ಕೆ ತಂದಿದ್ದಾರೆ.

೨. ‘RailwaySeva’ ಈ ಟ್ವೀಟ್ ಅನ್ನು ಗಮನಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದು, RailMadad ಪೋರ್ಟಲ್‌ನಲ್ಲಿಯೂ ದೂರು ನೀಡಲಾಗಿದೆ.

೩. ದೂರಿನ ಸಂಖ್ಯೆಯನ್ನು ಕಿರು ಸಂದೇಶದ ಮೂಲಕ ಕಳುಹಿಸಿದ್ದು, ಮುಂದಿನ ಕ್ರಮಕ್ಕಾಗಿ ವ್ಯವಸ್ಥೆ ಸಕ್ರಿಯಗೊಂಡಿದೆ. (ತ್ವರಿತವಾಗಿ ಕಾರ್ಯಪ್ರವೃತ್ತರಾದ ವಕೀಲ ನಿರಂಜನ ಚೌಧರಿ ಮತ್ತು ಶ್ರೀ. ಕಿರಣ ಮಾಳಿ ಅವರಿಗೆ ಅಭಿನಂದನೆಗಳು! – ಸಂಪಾದಕರು)