Yogi Government Demolition Action : ಯೋಗಿ ಸರಕಾರದ ಬುಲ್ಡೋಜರ್ ಕಾರ್ಯಾಚರಣೆ: 225 ಮದರಸಾಗಳು, 30 ಮಸೀದಿಗಳು, 25 ದರ್ಗಾಗಳು, 6 ಈದ್ಗಾ ನೆಲಸಮ!

(ಈದ್ಗಾ ಎಂದರೆ ನಮಾಜ್ ಮಾಡಲು ಮೀಸಲಿಟ್ಟ ಬಯಲು ಪ್ರದೇಶ, ಮಜಾರ್ ಎಂದರೆ ಇಸ್ಲಾಮಿಕ್ ಸಂತರು ಅಥವಾ ಫಕೀರರ ಗೋರಿ)

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಯೋಗಿ ಸರಕಾರವು ನೇಪಾಳ ಗಡಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಕಾರ್ಯಾಚರಣೆಯಡಿಯಲ್ಲಿ, ಅಕ್ರಮ ಮಸೀದಿಗಳು ಮತ್ತು ಮದರಸಾಗಳ ಮೇಲೆ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗುತ್ತಿದೆ. ಇತ್ತೀಚೆಗೆ, 7 ಜಿಲ್ಲೆಗಳಲ್ಲಿ 225 ಮದರಸಾಗಳು, 30 ಮಸೀದಿಗಳು, 25 ದರ್ಗಾಗಳು ಮತ್ತು 6 ಈದ್ಗಾಗಳನ್ನು ನೆಲಸಮ ಮಾಡಲಾಗಿದೆ.

1. ಈ ಎಲ್ಲಾ ಕಾರ್ಯಾಚರಣೆಗಳು ನೇಪಾಳ ಗಡಿಗೆ ಹೊಂದಿಕೊಂಡಿರುವ ಮಹಾರಾಜಗಂಜ್, ಸಿದ್ಧಾರ್ಥನಗರ್, ಬಲರಾಮ್ಪುರ್, ಶ್ರಾವಸ್ತಿ, ಬಹರಾಯಿಚ, ಲಖಿಂಪುರ್ ಖೇರಿ ಮತ್ತು ಪಿಲಿಭಿತನಲ್ಲಿ ನಡೆದಿವೆ.

2. ಮೇ 14 ರಂದು, ಮಹಾರಾಜಗಂಜನಲ್ಲಿ ಅಕ್ರಮವಾಗಿ ನಿರ್ಮಿಸಲಾದ 29 ಮದರಸಾಗಳು, 9 ಮಸೀದಿಗಳು ಮತ್ತು 7 ಧಾರ್ಮಿಕ ಸ್ಥಳಗಳನ್ನು ಬುಲ್ಡೋಜರನಿಂದ ಕೆಡವಲಾಯಿತು. ಬಲರಾಮಪುರ್ ಜಿಲ್ಲೆಯಲ್ಲಿ 30 ಮದರಸಾಗಳು, 10 ಮಜಾರ್‍‌ಗಳು ಮತ್ತು 1 ಈದ್ಗಾ ಮೇಲೆ ಕ್ರಮ ಕೈಗೊಳ್ಳಲಾಯಿತು. ಶ್ರಾವಸ್ತಿ ಜಿಲ್ಲೆಯಲ್ಲಿ ಅತಿ ಹೆಚ್ಚು 110 ಅಕ್ರಮ ಮದರಸಾಗಳ ಮೇಲೆ ಕ್ರಮ ಕೈಗೊಳ್ಳಲಾಯಿತು. ಅಲ್ಲದೆ, ಈ ಜಿಲ್ಲೆಯ 1 ಮಸೀದಿ, 5 ಧಾರ್ಮಿಕ ಸ್ಥಳಗಳು ಮತ್ತು 2 ಈದ್ಗಾಗಳ ಮೇಲೂ ಕ್ರಮ ಕೈಗೊಳ್ಳಲಾಯಿತು.

3. ಬಹರಾಯಿಚನಲ್ಲಿ 13 ಮದರಸಾಗಳು, 8 ಮಸೀದಿಗಳು, 2 ಗೋರಿಗಳು ಮತ್ತು 1 ಈದ್ಗಾ ಅನ್ನು ಕೆಡವಲಾಯಿತು. ಲಖಿಂಪುರ ಖೇರಿಯಲ್ಲಿ 8 ಮದರಸಾಗಳು, 2 ಮಸೀದಿಗಳು, 1 ಧಾರ್ಮಿಕ ಸ್ಥಳ ಮತ್ತು 1 ಈದ್ಗಾ ಮೇಲೆ ಬುಲ್ಡೋಜರ್ ಕ್ರಮ ಕೈಗೊಳ್ಳಲಾಯಿತು. ಪಿಲಿಭಿತನಲ್ಲಿ 1 ಅಕ್ರಮ ಮಸೀದಿಯನ್ನು ಕೆಡವಲಾಯಿತು.

4. ಗಡಿ ಪ್ರದೇಶಗಳಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆರವುಗೊಳಿಸುವುದು ಮತ್ತು ಭದ್ರತೆಯನ್ನು ಖಚಿತಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

5. ಏಪ್ರಿಲ್ 2025 ರಲ್ಲಿ, ಯೋಗಿ ಸರಕಾರವು ಈ ಪ್ರದೇಶದಲ್ಲಿ ಬುಲ್ಡೋಜರ್ ಬಳಸಿ 89 ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿತ್ತು.

ಸಂಪಾದಕೀಯ ನಿಲುವು

ಇಷ್ಟೊಂದು ಅಕ್ರಮ ಕಟ್ಟಡಗಳು ನಿರ್ಮಾಣವಾಗುವವರೆಗೆ ಆಡಳಿತ ನಿದ್ರಿಸುತ್ತಿತ್ತೇ?