Pakistanis Imprisoned Across World : ಜಗತ್ತಿನಾದ್ಯಂತದ ಜೈಲುಗಳಲ್ಲಿ 23 ಸಾವಿರಕ್ಕೂ ಹೆಚ್ಚು ಪಾಕಿಸ್ತಾನೀಯರು ಬಂಧಿತರು

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ವಿದೇಶಾಂಗ ಸಚಿವರು ಸಂಸತ್ತಿನಲ್ಲಿ ನೀಡಿದ ಮಾಹಿತಿಯ ಪ್ರಕಾರ, ಪ್ರಸ್ತುತ ಜಗತ್ತಿನ ಹಲವು ದೇಶಗಳ ಕಾರಾಗೃಹಗಳಲ್ಲಿ 23 ಸಾವಿರ 456 ಪಾಕಿಸ್ತಾನೀಯರು ಬಂಧಿತರಾಗಿದ್ದಾರೆ. ಅವರ ಮೇಲೆ ಅತ್ಯಾಚಾರ, ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಮುಂತಾದ ಗಂಭೀರ ಆರೋಪಗಳಿವೆ.
ಇವರಲ್ಲಿ ಅತಿ ಹೆಚ್ಚು ಅಂದರೆ 12 ಸಾವಿರದ 156 ಮಂದಿ ಸೌದಿ ಅರೇಬಿಯಾದ ಜೈಲುಗಳಲ್ಲಿದ್ದಾರೆ. ಸಂಯುಕ್ತ ಅರಬ್ ಎಮಿರೇಟ್ಸ್‌ ನ ಕಾರಾಗೃಹಗಳಲ್ಲಿ 5 ಸಾವಿರ 292 ಪಾಕಿಸ್ತಾನೀಯರು ಶಿಕ್ಷೆ ಅನುಭವಿಸುತ್ತಿದ್ದಾರೆ. ಚೀನಾದ ಜೈಲುಗಳಲ್ಲಿ 400 ಪಾಕಿಸ್ತಾನೀಯರು ಇದ್ದಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಿ, ಅದರ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕುವುದು ಈಗ ಅವಶ್ಯಕವಾಗಿದೆ!