ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ, ಮೇ 19 (ಸುದ್ದಿ) – ಇಲ್ಲಿ ನಡೆಯುತ್ತಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಉಪಸ್ಥಿತರಿದ್ದ 20 ಸಾವಿರಕ್ಕೂ ಹೆಚ್ಚು ಧರ್ಮಪ್ರೇಮಿಗಳು ಗೋವಾದ ಪ್ರಸಿದ್ಧ ಸಾಂಪ್ರದಾಯಿಕ ಸಮಯಿ ನೃತ್ಯ ಮತ್ತು ಘೋಡೆಮೋಡಣಿ ನೃತ್ಯ ನೋಡಿ ಆನಂದಭರಿತರಾದರು. ದೇಶ-ವಿದೇಶಗಳಿಂದ ಬಂದಿದ್ದ ಧರ್ಮಪ್ರೇಮಿಗಳು ಗೋವಾದ ಈ ಆಧ್ಯಾತ್ಮಿಕ ಜನಪದ ಕಲೆಗಳನ್ನು ಮೊದಲ ಬಾರಿಗೆ ಅನುಭವಿಸಿದರು. ಜನಪದ ಕಲೆಯ ಸಾಂಸ್ಕೃತಿಕ ಪರಂಪರೆಯನ್ನು ನೋಡಿದಾಗ ಪ್ರೇಕ್ಷಕರು ಭಕ್ತಿ ಮತ್ತು ವೀರ ರಸದಲ್ಲಿ ಮುಳುಗಿದ್ದರು.
ಗೋವಾ ರಾಜ್ಯ ಕಲಾ ಮತ್ತು ಸಂಸ್ಕೃತಿ ಇಲಾಖೆ, ಹಾಗೆಯೇ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ, ಮಹೋತ್ಸವದ ಮೂರನೇ ದಿನದ ಮಧ್ಯಾಹ್ನ ಜನಪದ ಕಲೆಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇಲಾಖೆಯ ಅಧಿಕಾರಿಗಳಾದ ಉಮೇಶ ಶಿರೋಡ್ಕರ ಮತ್ತು ದೀಪ್ತೇಶ ಗಾವಡೆ ಅವರು ಈ ಕಾರ್ಯಕ್ರಮದ ಆಯೋಜನೆಗಾಗಿ ವಿಶೇಷ ಶ್ರಮ ವಹಿಸಿದ್ದರು.
#LIVE: Sanatan Rashtra Shankhanad Mahotsav 2025 – Day 2
🎶 A Grand Cultural Showcase by the Department of Art & Tourism, Government of Goa @TourismGoa https://t.co/wfidHjTMAA
Step beyond the beaches and witness the soul of Goa!
This mesmerizing presentation by the Goa… pic.twitter.com/WvJvGGnEZM— Sanatan Sanstha (@SanatanSanstha) May 19, 2025
ಈ ಸಾಂಸ್ಕೃತಿಕ ಅಧಿವೇಶನವು ಸಮಯಿ ನೃತ್ಯದಿಂದ ಪ್ರಾರಂಭವಾಯಿತು. ಉಸಗಾವದ ‘ಗುರುದೇವ ಕಲಾ ಸಂಘ’ದ ಕಲಾವಿದರು ತಲೆಯ ಮೇಲೆ ಕಾಲ್ದೀಪಗಳನ್ನು ಹಿಡಿದು, ಮಡಕೆಯ ತಾಳಕ್ಕೆ ಅತ್ಯಂತ ಸಮತೋಲಿತ ನೃತ್ಯ ಪ್ರದರ್ಶನ ಮಾಡಿದರು. ವಿಶಿಷ್ಟ ಮಾನವ ಗೋಪುರಗಳನ್ನು ರಚಿಸುವ ಮೂಲಕ ನೃತ್ಯ ಕಲಾವಿದರು ತಮ್ಮ ಕಲೆಯ ಕೌಶಲ್ಯವನ್ನು ಪ್ರದರ್ಶಿಸಿದರು. ಸಂಘದ ಶ್ರೀ. ಅಜಯ ಗಾವಡೆ ಅವರು ಈ ನೃತ್ಯಗಳ ಸಂಯೋಜನೆ ಮಾಡಿದ್ದರು.
ಘೋಡೆಮೋಡಣಿ
ಘೋಡೆಮೋಡಣಿ ನೃತ್ಯದಲ್ಲಿ ಯುದ್ಧದ ದೃಶ್ಯದ ಸಮಯದಲ್ಲಿ ‘ಹರ ಹರ ಮಹಾದೇವ’ ಘೋಷಣೆಯಿಂದ ವಾತಾವರಣದಲ್ಲಿ ವೀರತನ ತುಂಬಿತು. ನೃತ್ಯ ಮಾಡುತ್ತಾ ಯುದ್ಧದ ದೃಶ್ಯವನ್ನು ತೋರಿಸುವುದು ಅತ್ಯಂತ ಕಷ್ಟಕರ ಸಮೀಕರಣವಾಗಿದ್ದು, ಅದನ್ನು ಎಲ್ಲಾ ಕಲಾವಿದರು ಅತ್ಯಂತ ಸುಲಭವಾಗಿ ಪ್ರಸ್ತುತಪಡಿಸಿದರು. ತಾಳದ ವೇಗ ಹೆಚ್ಚಾದಂತೆ ಪ್ರೇಕ್ಷಕರ ಉತ್ಸಾಹವೂ ಅಷ್ಟೇ ಹೆಚ್ಚಾಯಿತು. ಈ ನೃತ್ಯಕ್ಕೆ ಪ್ರೇಕ್ಷಕರು ಅತ್ಯಂತ ಉತ್ಸಾಹದಿಂದ ಚಪ್ಪಾಳೆ ತಟ್ಟಿ ಪ್ರತಿಕ್ರಿಯಿಸಿದರು. ಈ ನೃತ್ಯವನ್ನು ಫೊಂಡಾದಲ್ಲಿರುವ ‘ಸರಸ್ವತಿ ಕಲಾ ಮಂಡಲ’ದ ಶ್ರೀ. ರಾಮಾ ಕುರ್ಟಿಕರ್ ಅವರು ಸಂಯೋಜಿಸಿದ್ದರು.
ಇದು ಗೋವಾದ ಸಾಂಪ್ರದಾಯಿಕ ನೃತ್ಯವಾಗಿದೆ. ಈ ನೃತ್ಯವು ಯೋಧನ ವೀರತ್ವ ಮತ್ತು ಪರಾಕ್ರಮದ ಸಂಕೇತವಾಗಿದೆ. ಕಲಾವಿದರು ತಮ್ಮ ಸೊಂಟಕ್ಕೆ ಮರದ ಕುದುರೆಗಳ ಪ್ರತಿಕೃತಿಗಳನ್ನು ಕಟ್ಟಿಕೊಳ್ಳುತ್ತಾರೆ. ಮೋಡಣಿ ಎಂದರೆ ಸುತ್ತುವರಿದು ನೃತ್ಯ ಮಾಡುವುದು. ಈ ನೃತ್ಯದಲ್ಲಿ ಪುರುಷ ಕಲಾವಿದರು ಸಾಂಪ್ರದಾಯಿಕ ಯೋಧನ ವೇಷಭೂಷಣಗಳನ್ನು ಧರಿಸಿ, ಕೈಯಲ್ಲಿ ಕತ್ತಿ ಮತ್ತು ಗುರಾಣಿಗಳನ್ನು ಹಿಡಿದುಕೊಳ್ಳುತ್ತಾರೆ. ಈ ನೃತ್ಯದಲ್ಲಿ ಯುದ್ಧತಂತ್ರ, ಸಾಹಸ ಮತ್ತು ಪರಾಕ್ರಮದ ತುಣುಕು ನೋಡಲು ಸಿಗುತ್ತದೆ. ಡೋಲು-ತಾಶ ನೃತ್ಯದಲ್ಲಿ ವೀರರಸವನ್ನು ಸೃಷ್ಟಿಸುತ್ತಾರೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ, ಈ ನೃತ್ಯವನ್ನು ಧರ್ಮದ ರಕ್ಷಣೆ ಮತ್ತು ಅಧರ್ಮದ ಮೇಲಿನ ವಿಜಯದ ಸಂಕೇತವೆಂದು ಪರಿಗಣಿಸಲಾಗಿದೆ. ನೃತ್ಯದ ಸಮಯದಲ್ಲಿ, ಮಹೋತ್ಸವದ ವಾತಾವರಣವು ‘ಹರ ಹರ ಮಹಾದೇವ’ ಘೋಷಣೆಯಿಂದ ತುಂಬಿಹೋಗಿತ್ತು.
ಕಾಲ್ದೀಪ ನೃತ್ಯ ನೃತ್ಯ
ಈಶ್ವರನನ್ನು ವಂದಿಸಿ ಕಾಲ್ದೀಪ ನೃತ್ಯವನ್ನು ಪ್ರಾರಂಭಿಸಲಾಗುತ್ತದೆ. ಪ್ರಜ್ವಲಿತ ಕಾಲ್ದೀಪಗಳನ್ನು ಆಧ್ಯಾತ್ಮಿಕ ಬೆಳಕು, ಶುದ್ಧತೆ ಮತ್ತು ಈಶ್ವರನ ಉಪಸ್ಥಿತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಪ್ರಜ್ವಲಿತ ಕಾಲ್ದೀಪಗಳನ್ನು ಕಲಾವಿದರು ತಮ್ಮ ತಲೆಯ ಮೇಲೆ ಇಟ್ಟುಕೊಂಡು ಸಮತೋಲನ ಕಾಯ್ದುಕೊಂಡು ನೃತ್ಯ ಮಾಡುತ್ತಾರೆ. ಈ ನೃತ್ಯವು ಏಕಾಗ್ರತೆ, ಸಮರ್ಪಣೆ ಮತ್ತು ಸಾಧನೆಯ ಸಂಕೇತವಾಗಿದೆ. ಈ ನೃತ್ಯದಿಂದ ಆತ್ಮದೊಳಗಿನ ಅಂಧಕಾರ ನಾಶವಾಗಿ ಆಂತರಿಕ ಬೆಳಕು ಮತ್ತು ಶಾಂತಿ ಉಂಟಾಗುತ್ತದೆ. ಇಂದಿಗೂ ಈ ನೃತ್ಯವು ಗೋವಾದ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸಂಪ್ರದಾಯದ ಜೀವಂತ ಸಂಕೇತವಾಗಿ ಉಳಿದಿದೆ.