
ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಕರ್ನಾಟಕದ ‘ಯುವ ಬ್ರಿಗೇಡ್’ನ ಮಾರ್ಗದರ್ಶಕ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ಮಾತನಾಡುತ್ತ ರಾಷ್ಟ್ರಕ್ಕೆ ಕವಿದಿರುವ ಮೋಡವನ್ನು ಸರಿಸಿ ಪುನಃ ಸನಾತನ ರಾಷ್ಟ್ರ ನಿರ್ಮಿತಿಯ ಕಾರ್ಯ ಈ ಮಹೋತ್ಸವದ ಮೂಲಕ ನಡೆಯುತ್ತಿದೆ ಎಂದರು.
ಹಾಗೆಯೇ ‘ಸನಾತನ ಧರ್ಮಶ್ರೀ’ ಪುರಸ್ಕಾರದಿಂದ ಸನ್ಮಾನಿತರಾದವರಲ್ಲಿ ಭಾಗ್ಯನಗರದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್, ದೆಹಲಿಯ ಕಾಶಿ-ಮಥುರಾ ದೇವಾಲಯಗಳ ವಿಮೋಚನೆಗಾಗಿ ಹೋರಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಗೋವಾದ ವಿದ್ವಾನ್ ಆಚಾರ್ಯ ಯೋಗೇಶ್ವರ ಬೋರ್ಕರ್, ದೆಹಲಿಯ ‘ಸುದರ್ಶನ ವಾಹಿನಿ’ಯ ಪ್ರಧಾನ ಸಂಪಾದಕ ಡಾ. ಸುರೇಶ ಚವ್ಹಾಣ್ಕೆ, ಉತ್ತರ ಪ್ರದೇಶದ ‘ಪ್ರಾಚ್ಯಂ’ನ ಸಂಸ್ಥಾಪಕ ಕ್ಯಾಪ್ಟನ್ ಪ್ರವೀಣ್ ಚತುರ್ವೇದಿ, ತಮಿಳುನಾಡಿನ ‘ಹಿಂದೂ ಮಕ್ಕಲ್ ಕಚ್ಚಿ’ಯ ಸಂಸ್ಥಾಪಕ ಶ್ರೀ. ಅರ್ಜುನ್ ಸಂಪತ್, ದೆಹಲಿಯ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಶ್ರೀ. ಉದಯ ಮಾಹೂರ್ಕರ್, ಬೆಲ್ಜಿಯಂನ ಲೇಖಕ ಡಾ. ಕೋಯೆನ್‌ರಾಡ್ ಎಲ್ಸ್ಟ್, ಒಡಿಶಾದ ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’ನ ಶ್ರೀ. ಅನಿಲ್ ಕುಮಾರ್ ಧೀರ್, ದೆಹಲಿಯ ‘ಅಗ್ನಿ ಸಮಾಜ’ದ ಸಂಸ್ಥಾಪಕ ಶ್ರೀ. ಸಂಜೀವ ನೆವರ್, ದೆಹಲಿಯ ‘ಸರಯು ಟ್ರಸ್ಟ್’ನ ಸಂಸ್ಥಾಪಕ ಶ್ರೀ. ರಾಹುಲ್ ದಿವಾನ್, ಹರಿಯಾಣದ ಚಿಂತಕ ಶ್ರೀ. ನೀರಜ್ ಅತ್ರಿ, ಇಂಡೋನೇಷ್ಯಾ-ಬಾಲಿಯ ‘ಧರ್ಮಸ್ಥಾಪನಂ’ ಫೌಂಡೇಶನ್‌ನ ರಸ ಆಚಾರ್ಯ ಪೂಜ್ಯ ಧರ್ಮಯಶ ಜೀ ಮಹಾರಾಜ್ ಮತ್ತು ಛತ್ತೀಸಗಢದ ಶ್ರೀ. ಪ್ರಬಲ ಪ್ರತಾಪ್ ಸಿಂಗ್ ಜು ದೇವ್ ಅವರು ಸೇರಿದ್ದಾರೆ.