Hindu Rashtra Ratna Award : ಕರ್ನಾಟಕದ ಪಂಚಶಿಲ್ಪಕಾರ ಪೂಜ್ಯ ಕಾಶೀನಾಥ ಕವಟೇಕರ್ ಇವರಿಗೆ ‘ಹಿಂದೂ ರಾಷ್ಟ್ರರತ್ನ’ ಪುರಸ್ಕಾರ

ಕರ್ನಾಟಕದ ಪಂಚಶಿಲ್ಪಕಾರ ಪೂಜ್ಯ ಕಾಶೀನಾಥ ಕವಟೇಕರ್ ಅವರಿಗೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರಿಂದ ‘ಹಿಂದೂ ರಾಷ್ಟ್ರರತ್ನ’ ಪುರಸ್ಕಾರ

ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಮುರ್ಡೇಶ್ವರದಲ್ಲಿರುವ ಶಿವನ ಪ್ರತಿಮೆಯು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಯಾಗಿದ್ದು, ಇದನ್ನು ಪೂಜ್ಯ ಕಾಶೀನಾಥ ಕವಟೇಕರ್ ಅವರು ನಿರ್ಮಿಸಿದ್ದಾರೆ. ಇವರ ಶಿಲ್ಪಕಲೆಯನ್ನು ನೋಡಿ ಪರಮಪೂಜ್ಯ ಗುರುದೇವರ ಬ್ರಹ್ಮರಥೋತ್ಸವದ ರಥದ ನಿರ್ಮಾಣವನ್ನು ಇವರಿಗೆ ಮಾಡಲು ಕೊಡಲಾಗಿತ್ತು. ಎಲ್ಲಾ ಪುರಸ್ಕಾರಗಳಿಗಿಂತ ಉಚ್ಚ ಪುರಸ್ಕಾರವನ್ನು ಇವತ್ತು ಸನಾತನ ಸಂಸ್ಥೆ‌ ನನಗೆ ನೀಡಿ ಗೌರವಿಸಿದೆ ಎಂದು ಆನಂದವನ್ನು ಹಂಚಿಕೊಂಡರು.