
ಗೋವಾ – ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕರಾದ ಶ್ರೀ. ಪ್ರಮೋದ ಮುತಾಲಿಕ್ ಇವರು ತಮ್ಮ ಮನೋಗತವನ್ನು ವ್ಯಕ್ತಪಡಿಸುತ್ತಾ, ನನಗೆ ಕೊಟ್ಟ ಪುರಸ್ಕಾರ ನನಗಲ್ಲ, ಲಕ್ಷಗಟ್ಟಲೆ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಹಿಂದೂ ಕಾರ್ಯಕರ್ತರಿಗಾಗಿದೆ. ಇಂದಿನ ಶಂಖನಾದ ಮಹೋತ್ಸವವು ಮಹಾಯುದ್ಧದ ಶಂಖನಾದವಾಗಿದೆ. ಭಾರತದ ಒಳಗಿನ ಶತ್ರುಗಳಿಗೆ ಓಡಿಸಲು ಮಾಡಿದ ಶಂಖನಾದವಾಗಿದೆ. ಶಾಸ್ತ್ರ ಮತ್ತು ಶಸ್ತ್ರದಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕಾಗಿದೆ ಎಂದರು.