Sanatan Dharma Flag Hoisted : ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ರಾರಾಜಿಸಿದ ಸನಾತನ ಧರ್ಮಧ್ವಜ

ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಎರಡನೇ ದಿನ ಐತಿಹಾಸಿಕ ಘಟನೆ ನಡೆಯಿತು. ಈ ಸಮಯದಲ್ಲಿ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ ಶುಭ ಕರ ಕಮಲದಿಂದ ಶಂಖನಾದ ಮತ್ತು ವೇದಮಂತ್ರಗಳ ಘೋಷಣೆಯೊಂದಿಗೆ ಸನಾತನ ಧರ್ಮಧ್ವಜವನ್ನು ಹಾರಿಸಲಾಯಿತು.

ಈ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರೊಂದಿಗೆ ಸನಾತನದ ಸಂತರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 23 ದೇಶಗಳ 20 ಸಾವಿರಕ್ಕೂ ಹೆಚ್ಚು ಸಾಧಕರು ಮತ್ತು ಹಿಂದೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ‘ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ’,‘ಜೈ ಶ್ರೀರಾಮ್’ಘೋಷಣೆಗಳು ಎಲ್ಲೆಡೆ ಮೊಳಗಿದವು.

‘ಸನಾತನ ಧರ್ಮ ಧ್ವಜ’ದ ವೈಶಿಷ್ಟ್ಯ: ಪ್ರತಿ ದೇವಾಲಯದಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸುವಂತೆ, ಸನಾತನ ರಾಷ್ಟ್ರಕ್ಕೆ ಸಂಬಂಧಿಸಿದ ‘ಸನಾತನ ಧರ್ಮ ಧ್ವಜ’ವನ್ನು ಹಾರಿಸಲಾಯಿತು. ಈ ಧ್ವಜವು ರಾಜಕೀಯ ಅಥವಾ ಸಾಂವಿಧಾನಿಕ ಸ್ವರೂಪದ್ದಲ್ಲ, ಬದಲಾಗಿ ಆಧ್ಯಾತ್ಮಿಕ ಸ್ವರೂಪದ್ದಾಗಿದೆ. ಇದು ‘ಧರ್ಮಧ್ವಜ’. ‘ಸನಾತನ ಹಿಂದೂ ರಾಷ್ಟ್ರದ ಸ್ಥಾಪನೆ’ಎಂಬ ಗುರಿಯನ್ನು ವಿಶ್ವದಾದ್ಯಂತ ಇರುವ ಹಿಂದೂಗಳಿಗೆ ಈ ಧ್ವಜವು ನೆನಪಿಸುತ್ತದೆ. ಮಹಾಭಾರತದ ಯುದ್ಧದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರು ಯಾವ ರಥದಲ್ಲಿ ಕುಳಿತಿದ್ದರೋ, ಅದೇ ರಥದಲ್ಲಿ ಕುಳಿತು ಹನುಮಂತನು ಹಿಡಿದಿದ್ದ ಧ್ವಜವೇ ಸನಾತನ ಧರ್ಮದ ಧ್ವಜವಾಗಿತ್ತು. ಹನುಮಂತನ ಬಣ್ಣ ಕೇಸರಿ; ಆದ್ದರಿಂದ ಸನಾತನ ರಾಷ್ಟ್ರದ ಧ್ವಜವು ಕೇಸರಿ ಬಣ್ಣದ್ದಾಗಿದೆ. ಈ ಧ್ವಜದ ಮೇಲೆ ‘ಕಲ್ಪವೃಕ್ಷದ ಕೆಳಗೆ ಕಾಮಧೇನು ನಿಂತಿರುವ’ ಚಿತ್ರವಿದೆ. ಕಲ್ಪವೃಕ್ಷ ಮತ್ತು ಕಾಮಧೇನು ಎರಡೂ ‘ಸಮೃದ್ಧಿ, ಪಾಲನೆ-ಪೋಷಣೆ, ರಕ್ಷಣೆ ಮತ್ತು ಶ್ರೀವಿಷ್ಣುವಿನ ಅಭಯ ಹಸ್ತ’ದ ಸಂಕೇತಗಳಾಗಿವೆ.