ಉಪಸ್ಥಿತರೆಲ್ಲರೂ ಪ್ರಭು ಶ್ರೀರಾಮನ ಅಸ್ತಿತ್ವದ ಅನುಭೂತಿಯನ್ನು ಅನುಭವಿಸಿದರು.

ಫರ್ಮಾಗುಡಿ (ಗೋವಾ), ಮೇ 17 (ವಾರ್ತೆ) – ರಾಮರಾಜ್ಯದಂತಹ ‘ಸನಾತನ ರಾಷ್ಟ್ರ’ದ ಸ್ಥಾಪನೆಯಲ್ಲಿ ಶ್ರೀರಾಮ ನಾಮ ಜಪದ ಮಹತ್ವ ಅನನ್ಯ ಸಾಧಾರಣವಾಗಿದೆ. ಈ ಭಾರತ ಭೂಮಿಯಲ್ಲಿ ಮತ್ತೊಮ್ಮೆ ಧರ್ಮ, ಮರ್ಯಾದೆ ಮತ್ತು ಸತ್ಯಗಳ ಸನಾತನ ರಾಷ್ಟ್ರ, ಅಂದರೆ ರಾಮರಾಜ್ಯ ಬರಬೇಕು, ಇದಕ್ಕಾಗಿ 1 ಕೋಟಿ ರಾಮನಾಮದ ಸಂಕಲ್ಪ ಮಾಡಲಾಗಿದೆ. ಈ ಸಂಕಲ್ಪ ಪೂರ್ಣಗೊಳ್ಳಲು ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಪ್ರಾರಂಭದಲ್ಲಿ ಉಪಸ್ಥಿತ ಸಾಧಕರು ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ನಾಮಜಪವನ್ನು ಸಾಮೂಹಿಕವಾಗಿ ಮತ್ತು ಭಾವಪೂರ್ಣವಾಗಿ ಮಾಡಿದರು. ಈ ಯಜ್ಞದಿಂದ ರಾಮರಾಜ್ಯದ ಸಂಕಲ್ಪವು ಮತ್ತಷ್ಟು ಬಲಗೊಂಡಿತು.
‘ನಾವೆಲ್ಲರೂ ನಿಮ್ಮ ಚರಣಗಳಲ್ಲಿ ಆಶ್ರಯ ಪಡೆದಿದ್ದೇವೆ. ನಿಮ್ಮ ಪವಿತ್ರ ನಾಮಸ್ಮರಣೆಯಿಂದ ಈ ಭಾರತ ಭೂಮಿಯು ಧರ್ಮ, ಸತ್ಯ ಮತ್ತು ಸಂಸ್ಕಾರಗಳಿಂದ ಸಮೃದ್ಧವಾಗಬೇಕು, ಸನಾತನ ರಾಷ್ಟ್ರದ ಸ್ಥಾಪನೆಗಾಗಿ ನಮ್ಮೆಲ್ಲರಿಗೂ ಆಧ್ಯಾತ್ಮಿಕ ಶಕ್ತಿ ದೊರೆಯಲಿ ಮತ್ತು ಈ ರಾಷ್ಟ್ರವು ಆದಷ್ಟು ಬೇಗ ‘ಸನಾತನ ರಾಷ್ಟ್ರ’ವಾಗಬೇಕು’, ಎಂದು ಪ್ರಭು ಶ್ರೀರಾಮನ ಪವಿತ್ರ ಚರಣಗಳಿಗೆ ಭಾವಪೂರ್ಣ ಪ್ರಾರ್ಥನೆ ಸಲ್ಲಿಸಿ ಜಪಯಜ್ಞವನ್ನು ಪ್ರಾರಂಭಿಸಲಾಯಿತು. ಸನಾತನ ರಾಷ್ಟ್ರದ ಸ್ಥಾಪನೆಗಾಗಿ ಸಹಸ್ರಾರು ಸಾಧಕರು ಒಟ್ಟಾಗಿ ಶ್ರೀರಾಮನ ನಾಮಜಪ ಮಾಡುವುದು ಈ ಮಹೋತ್ಸವದ ಅತ್ಯಂತ ಮಹತ್ವದ ಭಾಗವಾಗಿತ್ತು. ಇದೇ ರೀತಿಯ ಜಪಯಜ್ಞವು ಮಹೋತ್ಸವದ ಎರಡನೇ ದಿನವಾದ ಮೇ 18 ರಂದು ಸಹ ನಡೆಯಲಿದೆ.