ಗೋವಾ – ಇಂದಿನ ಕಾರ್ಯಕ್ರಮದ ನಿಮಿತ್ತ ನಾನು ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ. ಇಲ್ಲಿ ಶಂಖನಾದ ಪ್ರಾರಂಭವಾಗಿದೆ. ಈ ಕಾರ್ಯದಲ್ಲಿ ನನ್ನ ಕೊಡುಗೆಯೂ ಇರುತ್ತದೆ. ಭಾರತ ದೇಶದಲ್ಲಿ ಚಿನ್ನದ ಧೂಮ ಬರುತ್ತಿತ್ತು, ಎಲ್ಲೆಡೆ ಮಂತ್ರ ಪಠಣವಾಗುತ್ತಿತ್ತು. ನಂತರ ಬಂದ ಆಕ್ರಮಣಕಾರರು ಸನಾತನ ಸಂಸ್ಕೃತಿಯನ್ನು ನಾಶಪಡಿಸಲು ಪ್ರಯತ್ನಿಸಿದರು, ಆದರೂ ಆ ಸಂಸ್ಕೃತಿ ಇಂದಿಗೂ ಉಳಿದುಕೊಂಡಿದೆ. ಹಿಂದೂ ರಾಷ್ಟ್ರದ ಸ್ವಾಭಿಮಾನವೆಂದರೆ ಶ್ರೀರಾಮಮಂದಿರ. ಹಿಂದೂಗಳು ಪ್ರತಿ ಬಾರಿಯೂ ಹೋರಾಟ ಮಾಡಿದ್ದಾರೆ, ಬಲಿದಾನ ನೀಡಿದ್ದಾರೆ. ಈಗ ಮತ್ತೆ ಹಿಂದೂಗಳ ಸಮಯ ಬಂದಿದೆ. ಎಲ್ಲ ಸಂತರು ಒಟ್ಟಾಗಿ ಸನಾತನ ರಾಷ್ಟ್ರ ಕಾರ್ಯಕ್ಕಾಗಿ ಮುಂದೆ ಬರುತ್ತಿದ್ದಾರೆ, ಈಗ ನಾವು ಜವಾಬ್ದಾರಿ ತೆಗೆದುಕೊಂಡು ಸಕ್ರಿಯರಾಗಬೇಕು.