ಗೋವಾದ ಸಮುದ್ರ ನೋಡಲು ಬರುವ ಜನರು ಈಗ ಸನಾತನದ ಕಾರ್ಯದಿಂದಾಗಿ ಭಾರತೀಯ ಸಂಸ್ಕೃತಿಯನ್ನು ನೋಡಲು ಬರುತ್ತಾರೆ! – ಡಾ. ಪ್ರಮೋದ ಸಾವಂತ್, ಮುಖ್ಯಮಂತ್ರಿ, ಗೋವಾ

  • ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ವಂದನೀಯ ಉಪಸ್ಥಿತಿಯಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆರಂಭ: 23 ದೇಶಗಳಿಂದ 19 ಸಾವಿರ ಭಕ್ತರ ಉಪಸ್ಥಿತಿ !

  • ಗೋವಾ ಸರಕಾರದ ವತಿಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ವಿಶೇಷ ಸನ್ಮಾನ

ದೀಪ ಪ್ರಜ್ವಾಲನೆ ಮಾಡುತಿರುವ, ಎಡಭಾಗದಿಂದ ಶ್ರೀ. ಅಭಯ ವರ್ತಕ್, ಕೇಂದ್ರ ರಾಜ್ಯ ಸಚಿವ ಶ್ರೀಪಾದ ನಾಯ್ಕ, ಪದ್ಮಶ್ರೀ ಶ್ರೀ ಸದ್ಗುರು ಬ್ರಹ್ಮಶಾನಂದ ಸ್ವಾಮೀಜಿ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆ ಮತ್ತು ಪೂ. (ಶ್ರೀಮತಿ) ಕುಂದಾ ಆಠವಲೆ, ಡಾ. ಸುರೇಶ ಚವ್ಹಾಣ್ಕೆ, ಪೂ. ದೇವಕೀನಂದನ್ ಠಾಕೂರ್, ಗೋವಾ ರಾಜ್ಯದ ಇಂಧನ ಸಚಿವ, ಶ್ರೀ. ಸುದಿನ್ ಧವಳೀಕರ್, ಶ್ರೀ. ದಾಮು ನಾಯಕ್, ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಫೊಂಡಾ, ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಹಿಂದೆ ಗೋವಾಕ್ಕೆ ಜನರು ಸಮುದ್ರ, ಹಾಗೂ ಇತರ ವಿಷಯಗಳನ್ನು ನೋಡಲು ಬರುತ್ತಿದ್ದರು; ಇದಕ್ಕೆ ವಿರುದ್ಧವಾಗಿ ಗೋವಾದಲ್ಲಿ ಸನಾತನ ಸಂಸ್ಥೆಯ ಕಾರ್ಯ ಪ್ರಾರಂಭವಾದ ಮೇಲೆ ನಾಗರಿಕರು ಭಾರತೀಯ ಸಂಸ್ಕೃತಿ ಮತ್ತು ದೇವಾಲಯಗಳನ್ನು ನೋಡಲು ಗೋವಾಕ್ಕೆ ಬರುತ್ತಾರೆ.

ಗೋವಾ ಸರ್ಕಾರದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಯವರಿಗೆ ವಿಶೇಷ ಸನ್ಮಾನ ಮಾಡುತ್ತಿರುವ ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್

ಗೋವಾ ಭೋಗಭೂಮಿಯಲ್ಲ, ಇದು ದೇವಭೂಮಿಯಾಗಿದೆ. ಸನಾತನ ಸಂಸ್ಕೃತಿ ಮತ್ತು ಶಂಖನಾದ ಮಹೋತ್ಸವದಿಂದಾಗಿ ಇಲ್ಲಿನ ಆರ್ಥಿಕತೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಹೆಚ್ಚುತ್ತದೆ. ಕಳೆದ ೨೫ ವರ್ಷಗಳಿಂದ ಸನಾತನ ಸಂಸ್ಥೆ ಹಿಂದೂ ಧರ್ಮದ ಪ್ರಸಾರ ಮಾಡುವ ದೊಡ್ಡ ಕಾರ್ಯವನ್ನು ಮಾಡುತ್ತಿದೆ ಮತ್ತು ಸನಾತನವು ಮಾಡಿದ ಆಧ್ಯಾತ್ಮಿಕ ಗ್ರಂಥಗಳ ರಚನೆಯು ಯುವಕರಿಗೆ ಪ್ರೇರಣೆ ನೀಡುವ ಮತ್ತು ಮುಂದಿನ ೧೦೦ ವರ್ಷಗಳವರೆಗೆ ಮಾರ್ಗದರ್ಶಕವಾಗಿದೆ. ಸನಾತನ ಸಂಸ್ಥೆಯ ಕಾರ್ಯವು ಸಮಾಜಕ್ಕೆ ದೀಪಸ್ತಂಭದಂತಿದೆ ಎಂದು ಗೋವಾ ರಾಜ್ಯದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಶ್ಲಾಘಿಸಿದ್ದಾರೆ.

ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಅಠವಲೆ ಅವರ ೮೩ನೇ ಜನ್ಮೋತ್ಸವ ಮತ್ತು ಸಂಸ್ಥೆಯ ರಜತ ಮಹೋತ್ಸವದ ವರ್ಷದ ನಿಮಿತ್ತ ಗೋವಾದಲ್ಲಿ 17 ರಿಂದ 19 ಮೇ 2025 ರ ಅವಧಿಯಲ್ಲಿ ಫರ್ಮಾ ಗುಡಿ, ಫೊಂಡಾದಲ್ಲಿರುವ ಗೋವಾ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಐತಿಹಾಸಿಕವಾಗಿ ಆಯೋಜಿಸಲಾಗಿದೆ. ಅದರ ಉದ್ಘಾಟನಾ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಮಹೋತ್ಸವದ ಪ್ರಾರಂಭದಲ್ಲಿ ಶಂಖನಾದ, ಗಣೇಶ ವಂದನೆ ಮತ್ತು ವೇದ ಮಂತ್ರ ಪಠಣದ ನಂತರ ಗಣ್ಯರ ಹಸ್ತದಿಂದ ದೀಪ ಪ್ರಜ್ವಲನ ಮಾಡಲಾಯಿತು.

ಕರ್ನಾಟಕದಿಂದ 5000ಕ್ಕೂ ಅಧಿಕ ಹಿಂದೂ ಬಂಧುಗಳು ಮತ್ತು ಅನೇಕ ಗಣ್ಯರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಯುವ ಬ್ರಿಗೇಡನ ಶ್ರೀ. ಚಕ್ರವರ್ತಿ ಸೂಲಿಬೆಲೆ, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ್ ಮುತಾಲಿಕ್, ನ್ಯೂ ಹಾರೋಜನ ಕಾಲೇಜಿನ ಮುಖ್ಯಸ್ಥರಾದ, ಶ್ರೀ. ಮೋಹನ ಮೇಘನಾನಿ, ಶಾಂಭವಿ ಪೀಠದ ಸ್ವಾಮೀಜಿಗಳಾದ, ಶ್ರೀ ಆನಂದ ಸ್ವರೂಪ ಮಹಾರಾಜರು, ನಿವೃತ್ತ ಐ.ಎ.ಸ್ ಶ್ರೀ. ನಂದಕುಮಾರ ಮುಂತಾದ ಗಣ್ಯರು, ಸಂತ ಮಹಂತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗೋವಾದ ಕುಂಡೈಯಲ್ಲಿರುವ ದತ್ತ ಪದ್ಮನಾಭ ಪೀಠದ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದ ಸ್ವಾಮೀಜಿ, ‘ಸನಾತನ ಬೋರ್ಡ್’ನ ಪ್ರವರ್ತಕ ಪೂ. ದೇವಕೀನಂದನ್ ಠಾಕೂರ್, ಕೇಂದ್ರ ಇಂಧನ ರಾಜ್ಯ ಸಚಿವ ಶ್ರೀ. ಶ್ರೀಪಾದ್ ನಾಯಕ್, ಗೋವಾದ ವಿದ್ಯುತ್ ಸಚಿವ ಶ್ರೀ. ಸುದಿನ್ ಧವಳೀಕರ್, ಗೋವಾ ರಾಜ್ಯದ ಸಮಾಜ ಕಲ್ಯಾಣ ಸಚಿವ ಶ್ರೀ. ಸುಭಾಷ್ ಫಳದೇಸಾಯಿ, ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಮತ್ತು ಶ್ರೀ. ಅಭಯ ವರ್ತಕ್ ಉಪಸ್ಥಿತರಿದ್ದರು.

“ನಾವು ವಿಶ್ವದ ಅತ್ಯಂತ ಪ್ರಾಚೀನ ಸಂಪ್ರದಾಯದ ರಕ್ಷಕರು. ನಮ್ಮ ಮೂಲ ನಾಗರಿಕತೆಯು ಸನಾತನ ಧರ್ಮದಲ್ಲಿ ಅಡಗಿದೆ ! – ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್

ಮೈಸೂರು ರಾಜವಂಶದ ಯುವರಾಜ ಹಾಗೂ ಮೈಸೂರಿನ ಸಂಸದ ಶ್ರೀ. ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಮಾತನಾಡುತ್ತಾ, ‘‘ಅಧ್ಯಾತ್ಮವೇ ನಮ್ಮೆಲ್ಲರ ಮೂಲ ತಿರುಳು ಮತ್ತು ಅದೇ ನಮ್ಮ ಸನಾತನ ರಾಷ್ಟ್ರದ ಮೂಲ ಕಲ್ಪನೆಯಾಗಿದೆ. ಸನಾತನ ರಾಷ್ಟ್ರವು ರಾಜಕೀಯ ಆಡಳಿತ ವ್ಯವಸ್ಥೆಯಲ್ಲ, ಬದಲಾಗಿ ಆಧ್ಯಾತ್ಮಿಕ ಸೇವಾಭಾವದಿಂದ ಮಾಡಿದ ವ್ಯವಸ್ಥೆಯಾಗಿದೆ.’’ ಈ ಸಂದರ್ಭದಲ್ಲಿ ಗೋವಾದ ವಿದ್ಯುತ್ ಸಚಿವ ಶ್ರೀ. ಸುದಿನ್ ಧವಳೀಕರ್, ಬಿಜೆಪಿಯ ಗೋವಾ ರಾಜ್ಯದ ರಾಜ್ಯಾಧ್ಯಕ್ಷ ಶ್ರೀ. ದಾಮೋದರ್ ನಾಯಕ್ ತಮ್ಮ ಮನೋಗತ ವ್ಯಕ್ತಪಡಿಸಿದರು. ಮಹೋತ್ಸವದ ಪ್ರಾರಂಭದಲ್ಲಿ ಧರ್ಮ ಸಂಸ್ಥಾಪನೆಗಾಗಿ ೧ ಕೋಟಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ನಾಮಜಪಕ್ಕೆ ಆರಂಭ ಮಾಡಲಾಯಿತು.

ಗೋವಾ ‘ಬೀಚ್’ನಲ್ಲಿ ಕುಳಿತುಕೊಳ್ಳುವ ಭೂಮಿಯಲ್ಲ, ಬದಲಾಗಿ ಪರಶುರಾಮನ ಉಪಾಸನೆ ಮಾಡುವ ಭೂಮಿ ! – ಪೂ. ದೇವಕೀನಂದನ್ ಠಾಕೂರ್

ಗೋವಾ ‘ಬೀಚ್’ನಲ್ಲಿ (ಸಮುದ್ರತೀರದಲ್ಲಿ) ಕುಳಿತುಕೊಳ್ಳುವ ಭೂಮಿಯಲ್ಲ, ಬದಲಾಗಿ ಪರಶುರಾಮನ ಉಪಾಸನೆ ಮಾಡುವ ಭೂಮಿಯಾಗಿದೆ. ಪಾಕಿಸ್ತಾನದ ಸರ್ಕಾರವು ಸ್ವತಃ ಭಿಕ್ಷೆ ಬೇಡುವಂತದ್ದಾಗಿದ್ದು, ಅದು ಭಯೋತ್ಪಾದಕರನ್ನು ತರಬೇತಿಗೊಳಿಸಿ ಇತರರಿಗೆ ಹಾನಿ ಮಾಡುತ್ತದೆ, ಆದರೆ ಇನ್ನೊಂದೆಡೆ ಭಾರತದಲ್ಲಿ ದೇವಾಲಯಗಳು, ಗೋಶಾಲೆಗಳು ಮತ್ತು ವೇದವಿದ್ಯಾಲಯಗಳ ನಿರ್ಮಾಣವಾಗುತ್ತಿದೆ. ನಂತರ ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರವಾಗಿತ್ತು ಮತ್ತು ಮುಂದೆಯೂ ಇರುತ್ತದೆ.

ಕ್ಷಣಚಿತ್ರಗಳು:

1. ಈ ಸಮಯದಲ್ಲಿ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಜೀ ಕಾ ಸಂಕ್ಷಿಪ್ತ ಚರಿತ್ರ’ ಎಂಬ ಹಿಂದಿ ಭಾಷೆಯ ಗ್ರಂಥದ, ಹಾಗೂ ‘ಇ-ಬುಕ್’ನ ಲೋಕಾರ್ಪಣ ಣೆ ವನ್ನು ಗಣ್ಯರ ಹಸ್ತದಿಂದ ಮಾಡಲಾಯಿತು.

2. ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ನಗರ’ದ ಮುಖ್ಯ ಪ್ರವೇಶದ್ವಾರಕ್ಕೆ ‘ಭಗವಾನ್ ಪರಶುರಾಮ್ ಸುವರ್ಣದ್ವಾರ’ ಎಂದು, ನಗರದ ಏಳು ಮಾರ್ಗಗಳಿಗೆ ‘ಸಪ್ತರ್ಷಿಗಳ’ ಹೆಸರನ್ನು, ಹಾಗೂ ಮೂರು ಮುಖ್ಯ ದೊಡ್ಡ ಸಭಾಮಂಟಪಗಳಿಗೆ ‘ಶ್ರೀನಿವಾಸ ಮಂಟಪಂ’, ‘ಶ್ರೀದೇವಿ ಮಂಟಪಂ’ ಮತ್ತು ‘ಭೂದೇವಿ ಮಂಟಪಂ’ ಎಂದು ನಾಮಕರಣ ಮಾಡಲಾಗಿದೆ. ಮಹೋತ್ಸವ ಸ್ಥಳದಲ್ಲಿ ಭೋಜನಕ್ಕಾಗಿ ಒಟ್ಟು ೧೫ ಮಂಟಪಗಳನ್ನು ನಿರ್ಮಿಸಲಾಗಿದ್ದು ಅವುಗಳಿಗೂ ದೇವತೆಗಳ ಹೆಸರನ್ನು ಇಡಲಾಗಿದೆ. ಭಗವಾನ್ ಶ್ರೀರಾಮ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯೊಂದಿಗೆ ಗೋವರ್ಧನ ಪರ್ವತವನ್ನು ಎತ್ತಿರುವ ಶ್ರೀಕೃಷ್ಣನ, ಹಾಗೂ ಅಫ್ಜಲ್ಖಾನ್ ವಧೆಯ ಕಟ್ಔಟ್ಗಳನ್ನು ನಿರ್ಮಿಸಲಾಗಿದೆ.

3. ಈ ಸಮಯದಲ್ಲಿ ‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ವತಿಯಿಂದ ೧ ಸಾವಿರ ವರ್ಷಗಳ ಹಿಂದಿನ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದರ್ಶನವನ್ನು ಎಲ್ಲರಿಗೂ ಮಾಡಿಸಲಾಯಿತು. ಈ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ SanatanRashtraShankhnad.in ವೆಬ್‌ಸೈಟ್‌ಗೆ ಭೇಟಿ ನೀಡಿ !

4. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಗೋವಾ ಸರ್ಕಾರದ ವತಿಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರಿಗೆ ಶಾಲು, ಶ್ರೀಫಲ ಮತ್ತು ಸ್ಮರಣಿಕೆ ನೀಡಿ ವಿಶೇಷ ಸನ್ಮಾನ ಮಾಡಿದರು.

5. ದೇಶದ ರಕ್ಷಣಾ ಕಾರ್ಯಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ಹಸ್ತದಿಂದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಅವರಿಗೆ ಸಹಾಯ ನಿಧಿಯನ್ನು ಹಸ್ತಾಂತರಿಸಲಾಯಿತು.