ಕ್ವೆಟಾ (ಬಲೂಚಿಸ್ತಾನ) – ಬಲೂಚಿಸ್ತಾನದ ಜಿವಾನಿ ಪ್ರದೇಶದಲ್ಲಿ ಬಲೂಚ ಲಿಬರೇಶನ ಆರ್ಮಿಯು ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಬೇಹುಗಾರನಾಗಿದ್ದ ಮುಲ್ಲಾ ಶರೀಫನ ಹತ್ಯೆ ಮಾಡಲಾಗಿದೆ, ಎಂದು ಹೇಳಲಾಗುತ್ತಿದೆ. ಮುಲ್ಲಾ ಶರೀಫ ಕಳೆದ ದಶಕದಿಂದ ಪಾಕಿಸ್ತಾನದ ಸೈನಿಕ ಗುಪ್ತಚರ ಸಂಸ್ಥೆ, ಕರಾವಳಿ ಕಾವಲು ಪಡೆ (ಕೋಸ್ಟ್ ಗಾರ್ಡ್) ಮತ್ತು ಇತರ ಭದ್ರತಾ ಪಡೆಗಳಿಗಾಗಿ ಬೇಹುಗಾರಿಕೆ ಮಾಡುತ್ತಿದ್ದನು. ಆತ ಬಲೂಚ ಯುವಕರನ್ನು ನಾಪತ್ತೆ ಮಾಡುವುದು, ಸೈನಿಕ ಕಾರ್ಯಾಚರಣೆಗಳ ಸಮಯದಲ್ಲಿ ಸ್ಥಳೀಯರಿಂದ ರಹಸ್ಯ ಮಾಹಿತಿ ಸಂಗ್ರಹಿಸುವುದು ಮತ್ತು ಬಲೂಚ ಜನರನ್ನು ಆರ್ಥಿಕವಾಗಿ ದಮನ ಮಾಡುವಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.
ಯಾವುದೇ ಬಲೂಚ್ ವ್ಯಕ್ತಿಯು ಪಾಕಿಸ್ತಾನಿ ಸೈನ್ಯ ಅಥವಾ ಅವರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳಿಗೆ ಯಾವುದೇ ರೀತಿಯ ಸಹಾಯ ಮಾಡುತ್ತಿರುವುದು ಕಂಡುಬಂದರೆ, ಅವರಿಗೆ ಯಾವುದೇ ರೀತಿಯ ರಿಯಾಯಿತಿ ನೀಡಲಾಗುವುದಿಲ್ಲ, ಎಂದು ಬಲೂಚ್ ಆರ್ಮಿಯು ಕರೆ ನೀಡಿದೆ.