Taiwan Supports Operation Sindoor : ತೈವಾನ್‌ನಿಂದ ಪಾಕಿಸ್ತಾನ ವಿರುದ್ಧದ ಭಾರತದ ಸೈನ್ಯ ಕಾರ್ಯಾಚರಣೆಗೆ ಬೆಂಬಲ

ತೈಪೆ (ತೈವಾನ್) – ಪಾಕಿಸ್ತಾನದಲ್ಲಿ ಭಾರತ ಕೈಗೊಂಡ ಸೈನಿಕ ಕ್ರಮವನ್ನು ತೈವಾನ್ ಬಹಿರಂಗವಾಗಿ ಬೆಂಬಲಿಸಿದೆ. ತೈವಾನ್‌ನ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, “ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಮತ್ತು ಗಡಿ ದಾಟಿ ಮುಗ್ಧ ನಾಗರಿಕರ ಮೇಲೆ ದಾಳಿ ಮಾಡುವ ಭಯೋತ್ಪಾದಕರನ್ನು ಎದುರಿಸಲು ಭಾರತ ಸರಕಾರ ಕೈಗೊಂಡ ಎಲ್ಲಾ ಕಾನೂನುಬದ್ಧ ಮತ್ತು ಅಗತ್ಯ ಕ್ರಮಗಳನ್ನು ತೈವಾನ್ ಬಲವಾಗಿ ಬೆಂಬಲಿಸುತ್ತದೆ” ಎಂದು ಹೇಳಿದೆ. ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ಭಯೋತ್ಪಾದನೆಯನ್ನು ಖಂಡಿಸಲಾಗಿದೆ.

ಮನವಿಯಲ್ಲಿ,

1. ಏಪ್ರಿಲ್ 22 ರಂದು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕವನ್ನು ಸೃಷ್ಟಿಸಿದೆ.

2. ತೈವಾನ್‌ನ ವಿದೇಶಾಂಗ ಸಚಿವಾಲಯವು ಅಂತರರಾಷ್ಟ್ರೀಯ ಭಯೋತ್ಪಾದನೆಯನ್ನು ತೀವ್ರವಾಗಿ ವಿರೋಧಿಸುತ್ತದೆ ಮತ್ತು ಅದನ್ನು ಎದುರಿಸಲು ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವ ಪಾಲುದಾರರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ.

3. ತೈವಾನ್‌ನ ವಿದೇಶಾಂಗ ಸಚಿವಾಲಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತೈವಾನ್ ಯಾವಾಗಲೂ ಜಂಟಿ ಪ್ರಯತ್ನಗಳಲ್ಲಿ ಭಾಗವಹಿಸುತ್ತದೆ.