Pakistani Product Ban: ಪಾಕಿಸ್ತಾನದ ರಾಷ್ಟ್ರಧ್ವಜ ಮತ್ತು ಇತರ ವಸ್ತುಗಳ ಮಾರಾಟವನ್ನು ನಿಲ್ಲಿಸಿ!

ಕೇಂದ್ರ ಸರಕಾರದಿಂದ ಇ-ಕಾಮರ್ಸ್ ಸಂಸ್ಥೆಗಳಿಗೆ ಆದೇಶ

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ

ನವದೆಹಲಿ – ವಸ್ತುಗಳನ್ನು ಆನ್ಲೈನ್ ಮಾರಾಟ ಮಾಡುವ ಸಂಸ್ಥೆಗಳು ಪಾಕಿಸ್ತಾನದ ರಾಷ್ಟ್ರಧ್ವಜ ಮತ್ತು ಇತರ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡುವುದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಅವರು ಈ ವಸ್ತುಗಳನ್ನು ತಕ್ಷಣ ತೆಗೆದುಹಾಕಬೇಕು ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (ಸೆಂಟ್ರಲ್ ಕನ್ಸುಮರ್ ಪ್ರೊಟೆಕ್ಷನ್ ಅಥಾರಿಟೀಸ) ಆದೇಶಿಸಿದೆ. ಇದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ ‘ಅಮೆಜಾನ್’, ‘ಫ್ಲಿಪ್ಕಾರ್ಟ್’ ಮುಂತಾದ ಸಂಸ್ಥೆಗಳು ಸೇರಿವೆ. ‘ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್’ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ಈ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಇದ್ದರೂ ಈ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ‘ಪಾಕಿಸ್ತಾನದ ವಸ್ತುಗಳನ್ನು ಮಾರಾಟ ಮಾಡುವುದು ಸೂಕ್ಷ್ಮವಾಗಿದೆ ಹಾಗೂ ಅಂತಹ ವಿಷಯಗಳನ್ನು ಸಹಿಸಲಾಗುವುದಿಲ್ಲ. ಎಲ್ಲಾ ಇ-ಕಾಮರ್ಸ್ ಸಂಸ್ಥೆಗಳು ಅಂತಹ ಉತ್ಪನ್ನಗಳನ್ನು ತಕ್ಷಣ ತೆಗೆದುಹಾಕಲು ಮತ್ತು ದೇಶದ ಕಾನೂನುಗಳನ್ನು ಪಾಲಿಸಲು ನಿರ್ದೇಶಿಸಲಾಗಿದೆ’ ಎಂದು ಅವರು ಇದರಲ್ಲಿ ಹೇಳಿದ್ದಾರೆ.