ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ!
ಫೊಂಡಾ (ಗೋವಾ), ಮೇ ೧೫ (ವಾರ್ತೆ.) – ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಕುರಿತಾದ ಕುತೂಹಲ ಹೆಚ್ಚುತ್ತಿರುವಂತೆಯೇ, ಬಸ್ ನಿಲ್ದಾಣದ ಸಮೀಪದ ಡಿಜಿಟಲ್ ಫಲಕದ ಮೂಲಕವೂ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಪ್ರಸಾರ ನಡೆಯುತ್ತಿದೆ!
೮X೧೦ ಅಳತೆಯ ಫಲಕದಲ್ಲಿನ ವಿಡಿಯೋ ಸ್ವರೂಪದ ಜಾಹೀರಾತಿನತ್ತ ನಗರವಾಸಿಗಳ ದೃಷ್ಟಿ ಕೇಂದ್ರೀಕೃತವಾಗುತ್ತಿದೆ. ಬಸ್ ನಿಲ್ದಾಣಕ್ಕೆ ಬರುವ-ಹೋಗುವವರಲ್ಲಿ ಇದರಿಂದ ಇದರ ಬಗ್ಗೆ ಕುತೂಹಲ ಮೂಡಿ ನಾಗರಿಕರು ನಿಂತು ಈ ವಿಡಿಯೋವನ್ನು ನೋಡುತ್ತಿದ್ದಾರೆ!
ಫೊಂಡಾ ನಿವಾಸಿಗಳ ಗಮನ ಸೆಳೆಯುತ್ತಿರುವ ಈ ಡಿಜಿಟಲ್ ಫಲಕದಲ್ಲಿ ಮೇ ೧೭ ರಿಂದ ೧೯ ರವರೆಗೆ ನಡೆಯಲಿರುವ ‘ನ ಭೂತೋ ನ ಭವಿಷ್ಯತಿ’ ಎನ್ನುವಂತಹ ಶಂಖನಾದ ಮಹೋತ್ಸವದ ಮಾಹಿತಿಯನ್ನು ಪ್ರತಿ ೧ ರಿಂದ ೨ ನಿಮಿಷಗಳಿಗೊಮ್ಮೆ ತೋರಿಸಲಾಗುತ್ತಿದೆ.