ಛತ್ರಪತಿ ಶಿವಾಜಿ ಮಹಾರಾಜರ ‘ಕಟೌಟ್’ ನೋಡಿ ಛತ್ರಪತಿ ಶಿವಾಜಿ ಮಹಾರಾಜ ಪ್ರೇಮಿಗಳಲ್ಲಿ ಕ್ಷಾತ್ರವೃತ್ತಿ ಜಾಗೃತ !

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ

ಫರ್ಮಾಗುಡಿ ಕೋಟೆಯಲ್ಲಿ ಹಾಕಲಾಗಿರುವ ಕ್ಷಾತ್ರವೃತ್ತಿಯನ್ನು ಜಾಗೃತಗೊಳಿಸುವ ಛತ್ರಪತಿ ಶಿವಾಜಿ ಮಹಾರಾಜರ ಈ ‘ಕಟೌಟ್’

ಫೋಂಡಾ, ಮೇ 15 (ವಾರ್ತಾ.) – ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ 83 ನೇ ಜನ್ಮದಿನ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವದ ವರ್ಷದ ಪ್ರಯುಕ್ತವಾಗಿ ಫೋಂಡಾದ ಫರ್ಮಾಗುಡಿಯಲ್ಲಿ ಮೇ 17 ರಿಂದ 19 ರವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವದ ಪ್ರಚಾರವು ಗೋವಾ ಸೇರಿದಂತೆ ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಬಂಗಾಳ, ನೇಪಾಳ, ಬಾಂಗ್ಲಾದೇಶ ಮುಂತಾದ ವಿವಿಧೆಡೆ ಭರದಿಂದ ಸಾಗಿದೆ. ಎಲ್ಲಾ ಗಣ್ಯರಿಗೂ ಆಹ್ವಾನ ಕಳುಹಿಸಲಾಗಿದ್ದು, ಮೇ 17 ರಂದು ಗೋವಾದಲ್ಲಿ ನಡೆಯುವ ಮಹೋತ್ಸವಕ್ಕೆ ಆಗಮಿಸಲು ಎಲ್ಲರೂ ಕಾತರರಾಗಿದ್ದಾರೆ.
ಮಹೋತ್ಸವದ ನಿಮಿತ್ತ ಪಟ್ಟಣದ ಫರ್ಮಾಗುಡಿ ಕೋಟೆಯಲ್ಲಿ ಹಿಂದವಿ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ‘ಕಟೌಟ್’ ಅನ್ನು ಹಾಕಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಕೈಯಲ್ಲಿ ಕತ್ತಿ ಮತ್ತು ಗುರಾಣಿ ಹಿಡಿದು ಮೊಘಲರ ವಿರುದ್ಧ ಹೋರಾಡಲು ಸಿದ್ಧರಾಗಿರುವ ಅದ್ಭುತ ಅನುಭವ ಈ ‘ಕಟೌಟ್’ ನಿಂದ ಮೂಡುತ್ತಿದೆ. ಈ ಕಟೌಟ್ ಜನರ ಗಮನ ಸೆಳೆದಿದ್ದು, ಅದನ್ನು ನೋಡಿದ ಅನೇಕ ಛತ್ರಪತಿ ಶಿವಾಜಿ ಮಹಾರಾಜ ಪ್ರೇಮಿಗಳು ಮತ್ತು ಧರ್ಮಪ್ರೇಮಿಗಳ ಕ್ಷಾತ್ರವೃತ್ತಿ ಜಾಗೃತವಾಗುತ್ತಿದ್ದು, ಅವರೆಲ್ಲರೂ ‘ಹರ ಹರ ಮಹಾದೇವ’ ಎಂದು ಘೋಷಣೆ ಕೂಗಲು ಪ್ರಾರಂಭಿಸಿದ್ದಾರೆ.