ನವದೆಹಲಿ – ಭಾರತ-ಪಾಕಿಸ್ತಾನದ ನಡುವಿನ ಆಪರೇಷನ್ ಸಿಂದೂರ್ ಸಮಯದಲ್ಲಿ ಟರ್ಕಿಯು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿತು, ಹಾಗೆಯೇ ಅಜೆರ್ಬೈಜಾನ್ ಪಾಕಿಸ್ತಾನವನ್ನು ಬೆಂಬಲಿಸಿತು. ಆದ್ದರಿಂದ ಭಾರತೀಯರು ಈ ಎರಡೂ ದೇಶಗಳ ಮೇಲೆ ವ್ಯಾಪಾರ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈ ಎರಡೂ ದೇಶಗಳ ಜೊತೆಗೆ ಭಾರತವು ವಾರ್ಷಿಕವಾಗಿ ಸುಮಾರು ೧೨ ಬಿಲಿಯನ್ ಡಾಲರ್‌ಗಳಷ್ಟು ವ್ಯಾಪಾರ ಮಾಡುತ್ತಿತ್ತು. ಇತ್ತೀಚೆಗೆ ಈ ದೇಶಗಳಿಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಈಗ ಈ ಎರಡೂ ವಿಷಯಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಈ ಎರಡೂ ದೇಶಗಳು ಭಾರತೀಯ ಪ್ರವಾಸಿಗರಿಂದ ೪ ಸಾವಿರ ಕೋಟಿ ರೂಪಾಯಿಗಳನ್ನು ಗಳಿಸಿದ್ದವು.
೧. ಈಗ ಪ್ರವಾಸೋದ್ಯಮ ವೆಬ್‌ಸೈಟ್‌ಗಳು ಟರ್ಕಿ ಮತ್ತು ಅಜೆರ್ಬೈಜಾನ್‌ಗೆ ಪ್ರವಾಸಕ್ಕೆ ಹೋಗದಂತೆ ಜನರನ್ನು ತಡೆಯುತ್ತಿವೆ. ಕೆಲ ದಿನಗಳ ಹಿಂದೆ ಪುಣೆಯ ವ್ಯಾಪಾರಿಗಳು ಟರ್ಕಿಯಿಂದ ಬರುವ ಸೇಬುಗಳನ್ನು ಖರೀದಿಸದಿರಲು ನಿರ್ಧರಿಸಿದ್ದರು. ಭಾರತದಲ್ಲಿ ‘#BoycottTurkey’ ಎಂಬ ಟ್ರೆಂಡ್ ‘ಎಕ್ಸ್’ನಲ್ಲಿ ಪ್ರಾರಂಭವಾಗಿದೆ.
೨. ‘ಗೋವಾ ವಿಲಾಸ್’ ಎಂಬ ಪ್ರವಾಸೋದ್ಯಮ ಸಂಸ್ಥೆಯು ಟರ್ಕಿ ಪ್ರಜೆಗಳಿಗೆ ಗೋವಾದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡದಿರಲು ನಿರ್ಧರಿಸಿದೆ. ರಾಜಸ್ಥಾನದ ಉದಯಪುರದ ಮಾರ್ಬಲ್ ವ್ಯಾಪಾರಿಗಳು ಟರ್ಕಿಯಿಂದ ಮಾರ್ಬಲ್ ತರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
೩. ವಿಶೇಷವಾಗಿ ಭಾರತೀಯರಿಂದ ವಿವಾಹಕ್ಕಾಗಿ ಟರ್ಕಿಯ ನಗರಗಳನ್ನು ಆಯ್ಕೆ ಮಾಡಲಾಗುತ್ತದೆ. ೨೦೨೨ ರಲ್ಲಿ ಟರ್ಕಿಯಲ್ಲಿ ಸುಮಾರು ೧ ಸಾವಿರ ವಿವಾಹಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾರತದ ಜೋಡಿಗಳ ಸಂಖ್ಯೆ ಹೆಚ್ಚಾಗಿತ್ತು. ಈ ವಿವಾಹ ಕಾರ್ಯಕ್ರಮಗಳಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸಂಪಾದಕೀಯ ನಿಲುವುಭಾರತೀಯರ ಶ್ಲಾಘನೀಯ ಕೃತ್ಯ! ಇಂತಹ ಕೃತಿಯನ್ನು ಮಾಡಲು ಪ್ರಯತ್ನಿಸುವ ರಾಷ್ಟ್ರಪ್ರೇಮಿಗಳು ನಿರ್ಮಾಣವಾಗುತ್ತಿರುವುದು, ಭಾರತ ಬದಲಾಗುತ್ತಿರುವುದರ ಲಕ್ಷಣವಾಗಿದೆ! |