Love Jihad Case : ಮುಸ್ಲಿಂ ಯುವಕ ತಾನು ಹಿಂದೂ ಎಂದು ಸುಳ್ಳು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು, ಮತಾಂತರಕ್ಕಾಗಿ ಒತ್ತಡ ಹೇರಿದ

ಶಹಜಹಾನಪುರ (ಉತ್ತರ ಪ್ರದೇಶ) ಇಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ

ಶಹಜಹಾನಪುರ (ಉತ್ತರ ಪ್ರದೇಶ) – ಇಲ್ಲಿ ಬಹಾರೆ ಆಲಂ ಎಂಬ ಮುಸ್ಲಿಂ ಯುವಕ ‘ರಾಕೇಶ’ ಎಂದು ಪರಿಚಯಿಸಿಕೊಂಡು ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ ನಂತರ ಆಕೆಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮುಸ್ಲಿಮರನ್ನು ಬಂಧಿಸಿದ್ದಾರೆ.

1. ಬಹಾರೆ ಆಲಂ ಮತ್ತು ಆತನ ಸಹೋದರ ಜಾನ ಮಹಮ್ಮದ್ ತಮ್ಮ ಧರ್ಮವನ್ನು ಮರೆಮಾಚಿ ಮದುವೆಯ ನೆಪದಲ್ಲಿ ಹರಿಯಾಣದಿಂದ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿ ಮತ್ತು ಆಕೆಯ ತಾಯಿಯನ್ನು ಶಹಜಹಾನಪುರಕ್ಕೆ ಕರೆತಂದರು.

2. ಶಹಜಹಾನಪುರ ತಲುಪಿದ ನಂತರ ಅಪ್ರಾಪ್ತ ವಯಸ್ಸಿನ ಹುಡುಗಿಯ ತಾಯಿಗೆ ಆರೋಪಿಗಳ ನಿಜವಾದ ಧರ್ಮದ ಬಗ್ಗೆ ಮಾಹಿತಿ ಸಿಕ್ಕಿತು. ಆಕೆ ಹಿಂದೂ ಸಂಘಟನೆಯನ್ನು ಸಂಪರ್ಕಿಸಿದಳು. ಹಿಂದೂ ಸಂಘಟನೆಯ ಪದಾಧಿಕಾರಿಗಳು ಪೊಲೀಸರ ಸಹಾಯದಿಂದ ಅವರನ್ನು ಮುಸ್ಲಿಮರ ಹಿಡಿತದಿಂದ ಬಿಡಿಸಿದರು.

3. ಸಂತ್ರಸ್ತ ಹುಡುಗಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನಲ್ಲಿ ಆರೋಪಿ ಮುಸ್ಲಿಂ ಸಹೋದರರು ಸಂತ್ರಸ್ತ ಹುಡುಗಿಯ ಮೇಲೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.

4. ಶಹಜಹಾನಪುರ ಪೊಲೀಸ ಠಾಣೆಯ ಉಸ್ತುವಾರಿ ಖುಟರ ರಾವತ ಅವರು, ಪೊಲೀಸರು ಇಬ್ಬರು ಸಹೋದರರನ್ನು ಬಂಧಿಸಿದ್ದಾರೆ, ಈ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಜಾರಿಯಲ್ಲಿದ್ದರೂ, ಮುಸ್ಲಿಮರು ಈ ರೀತಿ ಹಿಂದೂ ಹುಡುಗಿಯರ ಜೀವನವನ್ನು ನಾಶಪಡಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.